ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ಕಾರು ಚಾಲಕ ಅಭಿಷೇಕ್ ಎಂದು ತಿಳಿದು ಬಂದಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಅಭಿಷೇಕ್ ಪ್ರಾಯ 30 ವರ್ಷ ಎಂಬಾತನು ದಿನಾಂಕ: 10.12.2025 ರಂದು ತನ್ನ ಬಾಬ್ತು KA-19-ML-4161 ನಂಬ್ರದ ಕಾರಿನಲ್ಲಿ ಕಾಪು ಸಾಯಿರಾಧಾ ರೆಸಾರ್ಟ್ನಿಂದ ತನ್ನ ಮನೆಯಾದ ಮಂಗಳೂರಿಗೆ ಹೊರಟು ಹೋಗುತ್ತಾ 01:30 ಗಂಟೆಗೆ ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಮಾನವ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ತೀವೃ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾಪು ತಾಲೂಕು ಬಡಾ ಗ್ರಾಮದ ತೆಂಕ ಗ್ರಾಮದ ಪಡುಬಿದ್ರೆ ಕಲ್ಸಂಕದ ಬಳಿ ರಾ.ಹೆ. 66 ರಸ್ತೆಯಲ್ಲಿ ಚಾಲಕರ ನಿಯಂತ್ರಣ ತಪ್ಪಿ ಕಾರು ರಸ್ತೆಯ ಎಡಭಾಗಕ್ಕೆ ಚಲಿಸಿ ರಸ್ತೆಯ ಬದಿಯಲ್ಲಿ ಇರುವ ವಿಧ್ಯುತ್ ಕಂಬಕ್ಕೆ ತಾಗಿ ನಂತರ ಅದರ ಪಕ್ಕದಲ್ಲಿ ಇದ್ದ ತೆಂಗಿನ ಮರಕ್ಕೆ ಡಿಕ್ಕಿಯಾಗಿದ್ದು, ಪರಿಣಾಮ ಕಾರಿನಲ್ಲಿ ಇದ್ದ ಕಾರು ಚಾಲಕ ಅಭಿಷೇಕ್ ಈತನಿಗೆ ತಲೆಗೆ ಹಾಗೂ ಮುಖಕ್ಕೆ ತೀವೃ ತರಹದ ಗಾಯಗೊಂಡಿದ್ದು , ಗಾಯಗೊಂಡವರನ್ನು ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಅಖಿಲೇಶ್ ಅಮೀನ್ ಪ್ರಾಯ 29 ವರ್ಷ ತಂದೆ: ಪುರುಷೋತ್ತಮ ವಾಸ: ದೇವಗಿರಿ ಕಂಪೌಂಡ್, ಸಿಲ್ವರ್ ಗೇಟ್ ಕುಲಶೇಖರ ರವರು ದೂರು ನೀಡಿದ್ದು ಪಡುಬಿದ್ರಿ ಪೊಲೀಸ್ ಠಾಣೆ : ಅಪರಾಧ ಕ್ರಮಾಂಕ:143/2025,ಕಲಂ:281,106(1)ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.



