Home Karavali Karnataka ಉಡುಪಿ ವಕೀಲರ ಸಂಘದಿಂದ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅವರಿಗೆ ಸನ್ಮಾನ…!!

ಉಡುಪಿ ವಕೀಲರ ಸಂಘದಿಂದ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅವರಿಗೆ ಸನ್ಮಾನ…!!

ಉಡುಪಿ : ಅನ್ಯ ಕಾರ್ಯ ನಿಮಿತ್ತ ಉಡುಪಿಗೆ ಆಗಮಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ವಿಭು ಬಕ್ರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಶ್ರೀಮತಿ ಅನು ಸಿವರಾಮನ್ ಇವರನ್ನು ಇಂದು ಡಿಸೆಂಬರ್ ತಾ. 6ರಂದು ಉಡುಪಿಯ ಪ್ರವಾಸಿ ಮಂದಿರದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ಅಧ್ಯಕ್ಷ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ಇವರ ನೇತೃತ್ವದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀ ಕಿರಣ್ ಎಸ್. ಗಂಗಣ್ಣವರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ದೇವದಾಸ್ ವಿ. ಶೆಟ್ಟಿಗಾರ್, ಖಜಾಂಚಿ ಶ್ರೀಮತಿ ಹಿಲ್ಡಾ ಕ್ಯಾಸ್ಟಲಿನೊ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ನಾಗರಾಜ್, ಗೀತಾ ಕೌಸಿಕ್, ಸಚಿನ್ ಶೆಟ್ಟಿ, ಗುರುಪ್ರಸಾದ್ ಜಿ.ಎಸ್., ದೀಪಕ್ ಕುಮಾರ್ ಪೂಜಾರಿ, ದೀಪಾ ಕೆ. ಶೆಟ್ಟಿ, ವಿನಯ ಸುವರ್ಣ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ರಾಘವೇಂದ್ರ ರಾವ್ ಮತ್ತು ಮಂಗಳೂರಿನ ಜಿಲ್ಲಾ ಸರ್ಕಾರಿ ವಕೀಲ ಶ್ರೀ ಎಂ.ಪಿ. ನೊರೋನಾ ಉಪಸ್ಥಿತರಿದ್ದರು.