Home Latest ಸುರತ್ಕಲ್: ಮಗುಚಿಬಿದ್ದ ಮೀನುಗಾರಿಕೆ ಬೋಟ್ : 7 ಮಂದಿ ಮೀನುಗಾರರ ರಕ್ಷಣೆ..!!

ಸುರತ್ಕಲ್: ಮಗುಚಿಬಿದ್ದ ಮೀನುಗಾರಿಕೆ ಬೋಟ್ : 7 ಮಂದಿ ಮೀನುಗಾರರ ರಕ್ಷಣೆ..!!

ಸುರತ್ಕಲ್: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿಬಿದ್ದ ಘಟನೆ ಸುರತ್ಕಲ್ ದೊಡ್ಡಕೊಪ್ಲ ಬಳಿ ಶುಕ್ರವಾರ ಬೆಳಗ್ಗೆ ನಡೆದಿರುವ ಬಗ್ಗೆ ವರದಿಯಾಗಿದೆ.

ಬೋಟ್ ನಲ್ಲಿದ್ದ ಎಲ್ಲಾ 7ಮಂದಿ ತಮಿಳು ನಾಡು ಮೂಲದ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಮುಳುಗಡೆಯಾದ ಬೋಟು ಮಲ್ಪೆ ಮೂಲದ್ದೆನ್ನಲಾಗಿದ್ದು, ಘಟನಾ ಸ್ಥಳಕ್ಕೆ ಕೋಸ್ಟ್ ಗಾರ್ಡ್ ಸಿಬ್ಬಂದಿ ದೌಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ.