Home Crime ಮೂಡಬಿದ್ರೆ : ತಾಯಿ-ಮಗ ನಾಪತ್ತೆ…!!

ಮೂಡಬಿದ್ರೆ : ತಾಯಿ-ಮಗ ನಾಪತ್ತೆ…!!

ಮೂಡಬಿದ್ರೆ : ತನ್ನ 7ವರ್ಷದ ಮಗನೊಂದಿಗೆ ಶಿರ್ತಾಡಿಯ ಮಹಿಳೆಯೋರ್ವರು ಅ.6ರಿಂದ ನಾಪತ್ತೆಯಾಗಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರು ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಗೀತಾ (39) ಹಾಗೂ ಅವರ ಮಗ ಯಶಸ್ (7) ಎಂದು ತಿಳಿದು ಬಂದಿದೆ.

ಗೀತಾ ಅವರು ಅ. 6ರಂದು ಸಂಜೆ ಮಗ ಯಶಸ್‌ನನ್ನು ಶಾಲೆಯಿಂದ ಕರೆದುಕೊಂಡು ಮೂಡುಬಿದಿರೆ ಪೇಟೆಗೆ ಹೋಗಿ ಬರುವುದಾಗಿ ನೆರೆಮನೆಯ ಚಿದಾನಂದ ಅವರಿಗೆ ತಿಳಿಸಿ ತೆರಳಿದ್ದರು ಎಂದು ತಿಳಿದು ಬಂದಿದೆ.

ಆ ಬಳಿಕ ಮನೆಗೆ ವಾಪಸ್ಸಾಗದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಗೀತಾ ಅವರ ಗಂಡ ಸುರೇಶ್ (45) ಪೊಲೀಸರಿಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಗೀತಾ 5.3 ಅಡಿ ಎತ್ತರವಿದ್ದು, ಸಪುರ ಶರೀರ, ಗೋಧಿ ಮೈಬಣ್ಣ ಹಾಗೂ ಗುಂಗುರು ಕೂದಲು ಹೊಂದಿದ್ದಾರೆ. ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ಇವರ ಕುರಿತು ಮಾಹಿತಿ ದೊರೆತಲ್ಲಿ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯ 0824-2220801, 2220800 ಅಥವಾ ಮೂಡುಬಿದಿರೆ ಪೊಲೀಸ್ ಠಾಣೆಯ 08258-236333 ಸಂಖ್ಯೆಯನ್ನು ಸಂಪರ್ಕಿಸುವಂತೆ ಮೂಡುಬಿದಿರೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.