ಹೆಬ್ರಿ: ಪತಿಯ ಅನೈತಿಕ ಸಂಬಂಧ ಹಾಗೂ ಕಿರುಕುಳದಿಂದ ಬೇಸತ್ತು, ನಷ್ಟ ಪರಿಹಾರಕ್ಕಾಗಿ ಅನೈತಿಕ ಸಂಬಂಧ ಹೊಂದಿದ ಯುವತಿ ವಿರುದ್ಧ ಪತ್ನಿ ಸಿವಿಲ್ ದಾವೆ ದಾಖಲು ಮಾಡಿದ ಘಟನೆ ನಡೆದಿದೆ
ಹೌದು ಅದೊಂದು ಸುಂದರ ಸಂಸಾರ ದಂಪತಿಗಳಿಬ್ಬರೂ ಮುದ್ದಾದ ಎರಡು ಗಂಡು ಮಕ್ಕಳೊಂದಿಗೆ ಹೆಬ್ರಿಯ ಕನ್ಯಾನದಲ್ಲಿ ವಾಸಿಸುತ್ತಿದ್ದರು. ಪತಿ ಖಾಸಗಿ ಬಸ್ ಚಾಲಕನಾಗಿದ್ದು. ಈತನ ಹೆಸರು ಶಿವಪ್ರಸಾದ್, ಪತ್ನಿ ಹೆಸರು ಮಂಜುಳಾ. ಇವರ ವಿವಾಹ 2014ರಲ್ಲಿ ನಡೆಯಿತು. ಆದರೆ ಪತಿ ಶಿವಪ್ರಸಾದ್ ಈತನಿಗೆ ಮೊದಲೇ ಪರಿಚಯದವಳೆ ಆದ ಕಬ್ಬಿನಾಲೆಯ ಬಚ್ಚಪ್ಪು ಗ್ರಾಮದ ಕಾಲೇಜು ಹುಡುಗಿಯೊಂದಿಗೆ. ಅನೈತಿಕ ಸಂಬಂಧ ಕಟ್ಟಿಕೊಂಡಿದ್ದ. ಎರಡು ಮಕ್ಕಳ ತಂದೆ ಶಿವಪ್ರಸಾದ್. ಇದು ಹೆಂಡತಿ ಮಂಜುಳಾಗೆ ತಿಳಿದು. ಒಂದು ದಿನ ಇವರಿಬ್ಬರು ಕಾಮದಾಟದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಮನೆಯಲ್ಲಿ ಸಿಕ್ಕಿಬಿದ್ದರು.
ಇದರಿಂದ ಮನನೊಂದು ಮಂಜುಳ ಹಾಗೂ ಮನೆಯವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಮರುದಿನ ಕಾಲೇಜು ಹುಡುಗಿ ಹಾಗೂ ಅವಳ ಚಿಕ್ಕಮ್ಮ ಇಬ್ಬರು ಮಂಜುಳ ಅವರ ಮನೆಗೆ ಬಂದು ಕಾಲಿಗೆ ಬಿದ್ದು ತನ್ನ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ನಿಜ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ. ಈ ಎಲ್ಲಾ ಘಟನೆಯನ್ನು ಮಂಜುಳ ಹಾಗೂ ಅವರ ಮನೆಯವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಈ ಪ್ರಕರಣದ ಬಗ್ಗೆ ಪೊಲೀಸರು ಠಾಣೆಗೆ ಶಿವಪ್ರಸಾದ್ ಹಾಗೂ ಯುವತಿ ತಪ್ಪುಗೆ ಮುಚ್ಚಳಿಕೆ ಬರೆಸಿಕೊಂಡಿರುತ್ತಾರೆ. ಇದನ್ನು ನಂಬಿ ಮಂಜುಳಾ ಅವರು ಶಿವಪ್ರಸಾದನೊಂದಿಗೆ ದಾಂಪತ್ಯ ಜೀವನ ಪ್ರಾರಂಭಿಸುತ್ತಾರೆ. ಆದರೆ ಇದು ಸ್ವಲ್ಪ ದಿನ ಮಾತ್ರ. ಅನೈತಿಕ ಸಂಬಂಧವನ್ನು ಅವರು ಪುನಃ ಮುಂದುವರಿಸಿದ್ದರು. ತದನಂತರ ಮಂಜುಳಾ ಅವರು ಶಿವಪ್ರಸಾದ್ ಹಾಗೂ ಅನುಷಾಳ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಸದ್ರಿ ದೂರಿನ ಅನ್ವಯ ಕ್ರೈಂ ನಂಬರ್ 0006/2025 ಶಿವಪ್ರಸಾದ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದರು. ಹೆಬ್ರಿ ಪೊಲೀಸರು ತನಿಖೆಯನ್ನು ಮುಂದುವರಿಸಿ ಸದ್ರಿ ಅವರ ವಿರುದ್ಧ ಸಿಸಿ ನಂಬರ್ 1525/2025 ಚಾರ್ಜ್ ಶೀಟನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಶಿವಪ್ರಸಾದ್ ಅನೈತಿಕ ಸಂಬಂಧವನ್ನು ಮುಂದುವರಿಸುವ ಸಲುವಾಗಿ ತನ್ನ ಹೆಂಡತಿ ಹೆಸರಿನಲ್ಲಿ ಸಾಲವನ್ನು ಪಡೆದು ಎಲ್ಲಾ ಹಣವನ್ನು ಯುವತಿಗೆ ನೀಡಿರುತ್ತಾನೆ. ಹಾಗೂ ನನಗೆ ಹೆಂಡತಿ ಮಕ್ಕಳು ಬೇಡ ಪ್ರೇಯಸಿ ಯುವತಿ ನನಗೆ ಬೇಕೆಂದು ಈತನೇ ವಿಚ್ಛೇದನಕ್ಕಾಗಿ ಕೋಟಿಗೆ ಒಂದು ವರ್ಷದ ಹಿಂದೆ ಅರ್ಜಿ ಸಲ್ಲಿಸುತ್ತಾನೆ. ಕಳೆದ ಒಂದು ವರ್ಷದಿಂದ ಉಡುಪಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ವಾದ ವಿವಾದಗಳು ನಡೆಯುತ್ತಿದೆ.
ಕಡು ಬಡತನದಲ್ಲಿ ಒಂಟಿಯಾಗಿ ಎರಡು ಸಣ್ಣ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ಮಂಜುಳ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಎಲ್ಲಾ ಸಾಲವನ್ನು ತಾನೇ ತಿಳಿಸಬೇಕಾಗಿದೆ ಪತಿ ಶಿವಪ್ರಸಾದ್ ಇವರ ಖರ್ಚಿಗೆ ಈ ತನಕ ಒಂದು ರೂಪಾಯಿ ಸಹ ಕೊಡುತ್ತಿಲ್ಲ. ಇದರಿಂದಾಗಿ ಮಂಜುಳಾ ರವರು ತನ್ನ ಹಾಗೂ ಇಬ್ಬರು ಮಕ್ಕಳ ಪರವಾಗಿ ಜೀವನ ಅಂಶ ಕೋರಿ ನ್ಯಾಯಾಲಯಕ್ಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಮಾನ್ಯ ಕಾರ್ಕಳ ನ್ಯಾಯಾಲಯವು ಮಧ್ಯಾಂತರ ಜೀವನಾಂಶವಾಗಿ ತಿಂಗಳಿಗೆ 5000ವನ್ನು ಕೊಡಬೇಕಾಗಿ ಆದೇಶ ನೀಡಿದೆ. ಈ ಹಣವನ್ನು ಸಮೇತ ಸದ್ರಿ ಶಿವಪ್ರಸಾದ್ ನೀಡುತ್ತಿಲ್ಲ. ಈ ಎಲ್ಲದಕ್ಕೂ ಮೂಲ ಕಾರಣಕರ್ತಳಾದ ಆ ಯುವತಿ ಮಂಜುಳಾವರ ಪತಿ ಶಿವಪ್ರಸಾದ್ ನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿರುತ್ತಾಳೆ. ಆದುದರಿಂದ ಮಂಜುಳ ಹಾಗೂ ಶಿವಪ್ರಸಾದ್ ದಾಂಪತ್ಯ ಜೀವನ ಮುರಿದುಬಿದ್ದಿದೆ.
ಇದರಿಂದ ಮಂಜುಳ ಹಾಗೂ ಅವರ ಮಕ್ಕಳಿಗೆ ಮಾನಸಿಕ ಹಿಂಸೆಯಾಗಿದ್ದು ಆರ್ಥಿಕ ನಷ್ಟ ಹಾಗೂ ಕಷ್ಟ ನಷ್ಟಗಳು ಆಗಿರುತ್ತದೆ. ಆದ್ದರಿಂದ ಮಂಜುಳ ಅವರು ಸದ್ರಿ ಯುವತಿಗೆ ನಷ್ಟ ಪರಿಹಾರ ಕೋರಿ 30 ಲಕ್ಷಕ್ಕೆ ಲೀಗಲ್ ನೋಟಿಸ್ ನೀಡಿದ್ದು ಈ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕಾರ್ಕಳ ಮಾನ್ಯ ನ್ಯಾಯಾಲಯದಲ್ಲಿ ಹೂಡಿರುತ್ತಾರೆ.





