ಬ್ರಹ್ಮಾವರ: ಬ್ರಹ್ಮಾವರ ಸಮೀಪ ವ್ಯಕ್ತಿಯೊಬ್ಬರು ಮನೆಯ ಹಾಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆ ಶರಣಾದವರು ಹರೀಶ್ ಎಂದು ತಿಳಿದು ಬಂದಿದೆ.
ಹರೀಶ್ ಅವರು ಮಂಗಳವಾರ ಮಧ್ಯಾಹ್ನ ತನ್ನ ವಾಸದ ಮನೆಯ ಹಾಲ್ ನಲ್ಲಿರುವ ಕಬ್ಬಿಣದ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




