Home Latest ಬೀದಿ ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಮುಳ್ಳು ಹಂದಿಯ ರಕ್ಷಣೆ…!!

ಬೀದಿ ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಮುಳ್ಳು ಹಂದಿಯ ರಕ್ಷಣೆ…!!

ಉಡುಪಿ : ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಮುಳ್ಳುಹಂದಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಫಾರೆಸ್ಟರ್ ಶಿವಾನಂದ ಮುಳ್ಳುಹಂದಿಯನ್ನು ಸ್ವೀಕರಿಸಿದ್ದು, ಚಿಕಿತ್ಸೆ ಒದಗಿಸಿ, ಗುಣಮುಖವಾದ ಬಳಿಕ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.

ಕಾದಾಟದಲ್ಲಿ ಮೈತುಂಬ ಮುಳ್ಳುಹಂದಿಯ ಮುಳ್ಳುಗಳನ್ನು ಬಹಳವಾಗಿ ಚುಚ್ಚಿಸಿಕೊಂಡಿರುವ ನಾಯಿ ನಾಪತ್ತೆಯಾಗಿದೆ. ಅಪಾಯದ ಸ್ಥಿತಿಯಲ್ಲಿರುವ‌ ನಾಯಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. ನಾಯಿಯ ಹುಡುಕಾಟ ಮುಂದುವರಿದಿದೆ.

‌ಚಿಟ್ಪಾಡಿಯ ಶ್ರೀನಿವಾಸ ನಗರದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮುಳ್ಳುಹಂದಿಯನ್ನು ಗಮನಿಸಿದ ಧನಂಜಯ ದೇವಾಡಿಗ ಎನ್ನುವರು ಒಳಕಾಡು ಅವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಒಳಕಾಡುವರು ಚಾಣಕ್ಷತನದಿಂದ ಗೋಣಿ ಚೀಲ ಬಳಸಿಕೊಂಡು, ಕಾರ್ಯಚರಣೆ ನಡೆಸಿ ಗಾಯಾಳು ಮುಳ್ಳುಹಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಮುಳ್ಳುಹಂದಿಯು ಮುಳ್ಳುಗಳನ್ನು ಎರಗಿಸಿ, ಪ್ರತಿದಾಳಿ ನಡೆಸುವ ಸಾಧ್ಯತೆ ಇದ್ದಿತ್ತು.