
ಕಾರ್ಕಳ, ಜು. 6: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಸಮೀಪದ ದೂಪದಕಟ್ಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ನಾರಾಯಣ ಜೆ. ಪೂಜಾರಿ ಎಂದು ಗುರುತಿಸಲಾಗಿದೆ. ಅವರ ಪುತ್ರ ಶ್ರೀಕಾಂತ್ ಪೂಜಾರಿ ನೀಡಿದ ಮಾಹಿತಿಯಂತೆ, ನಾರಾಯಣ ಜೆ. ಪೂಜಾರಿ ಅವರಿಗೆ ಮದ್ಯಪಾನದ ಚಟವಿದ್ದು, ಪ್ರತಿದಿನ ಮನೆಯ ಹಾಲ್‌ನಲ್ಲಿ ಮಲಗಿ ಬೆಳಿಗ್ಗೆ ತಮ್ಮ ಕೋಣೆಗೆ ತೆರಳುತ್ತಿದ್ದರು.
ಜುಲೈ 5ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಅವರು ಹಾಲ್‌ನಿಂದ ತಮ್ಮ ಕೋಣೆಗೆ ತೆರಳಿದ್ದರು. ಬಳಿಕ ಬೆಳಿಗ್ಗೆ ಸುಮಾರು 9.30ಕ್ಕೆ ಶ್ರೀಕಾಂತ್ ಪೂಜಾರಿ ಕೋಣೆಗೆ ತೆರಳಿ ನೋಡಿದಾಗ, ಕೋಣೆಯಲ್ಲಿದ್ದ ಕಬ್ಬಿಣದ ಪಕ್ಕಾಸಿಗೆ ಮಕ್ಕಳ ತೊಟ್ಟಿಲಿಗೆ ಕಟ್ಟಿದ್ದ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 34/2026ರಡಿ ಬಿಎನ್‌ಎಸ್‌ಎಸ್ ಕಲಂ 194 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



