ಉಡುಪಿ : ಕಿನ್ನಿಮುಲ್ಕಿ ಗಣೇಶೋತ್ಸವ ಕಾರ್ಯಕ್ರಮದ ಪರಿಸರದಲ್ಲಿ ಅಪರಿಚಿತ ಮಾನಸಿಕ ಯುವಕನೊಬ್ಬನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಕೊಳಲಗಿರಿ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಯುವಕ ತನ್ನ ಹೆಸರು ಪ್ರತಾಪ್ (28) ಬೆಂಗಳೂರು ಸಕಲೇಶಪುರ ಶಿವಮೊಗ್ಗ ಎಂಬುದಾಗಿ ತಿಳಿಸುತ್ತಾನೆ. ಹೆಂಡತಿ ಮತ್ತು ಮಗು ಇರುವುದಾಗಿ ಹೇಳಿರುತ್ತಾನೆ. ಸರಿಯಾದ ಮಾಹಿತಿ ನೀಡುವಲ್ಲಿ ವಿಫಲನಾಗಿದ್ದು, ಅದೆಷ್ಟೋ ದಿನಗಳಿಂದ ಸ್ನಾನವೂ ಮಾಡದೆ ಅಮಾನವೀಯವಾಗಿ ಸಂಚರಿಸುತ್ತಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಸುರಭಿ ರತನ್ ಹಾಗೂ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಸಹಾಯದಿಂದ ರಕ್ಷಿಸಿ ಆಶ್ರಮಕ್ಕೆ ದಾಖಲಿಸಿದ್ದಾರೆ.
ಯಾವುದೋ ವೇದನೆಯಿಂದ ಯುವಕ ಬೀದಿಪಾಲಾಗಿರುವುದು ಮೇಲ್ನೋಟಕ್ಕೆ ತೋರುತ್ತದೆ. ಈ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ.
ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಕೊಳಲಗಿರಿಯ ಸ್ವರ್ಗ ಆಶ್ರಮ ಸಂಪರ್ಕಿಸುವಂತೆ ಕೋರಲಾಗಿದೆ. ಸಾರ್ವಜನಿಕರು ಹಾಗೂ ಸಂಬಂಧ ಪಟ್ಟ ಇಲಾಖೆ ಯುವಕನ ಮನೆಯವರ ಪತ್ತೆಗೆ ಸಹಕರಿಸಬೇಕಾಗಿ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.