ಮಂಗಳೂರು: ನಗರದ ಲೇಡಿಹಿಲ್ ಸಮೀಪದ ದೀಪಾ ಅಪಾರ್ಟ್‌ಮೆಂಟ್‌ನಿಂದ 22 ವರ್ಷದ ವಿವಾಹಿತ ಮಹಿಳೆ ಕಾಣೆಯಾದ ಕುರಿತು ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಮ್ಮ ಬೀರಪ್ಪ ಯರಝರಿ (22) ಅವರು ಜೂನ್ 15, 2026ರಂದು ರಾತ್ರಿ ಸುಮಾರು 8.30 ಗಂಟೆಗೆ ಲೇಡಿಹಿಲ್‌ನ ದೀಪಾ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮನೆಯಿಂದ ಯಾರಿಗೂ ತಿಳಿಸದೇ ಹೊರಟು ಹೋಗಿದ್ದು, ಬಳಿಕ ಮನೆಗೆ ವಾಪಸ್ಸಾಗಿಲ್ಲ ಎಂದು ಪತಿ ಬೀರಪ್ಪ ಯರಝರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನೆಯಿಂದ ಹೊರಡುವ ವೇಳೆ ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೇವಮ್ಮ ಅವರು 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಕಪ್ಪು ಉದ್ದ ಕೂದಲು ಹೊಂದಿದ್ದಾರೆ. ಕುತ್ತಿಗೆಯಲ್ಲಿ ಬಂಗಾರದ ಕರಿಮಣಿ ಸರ ಹಾಗೂ ಮೂಗುತಿ ಧರಿಸಿರುತ್ತಾರೆ. ಎಡ ಕೈಯಲ್ಲಿ “D B” ಮತ್ತು ಬಲ ಕೈಯಲ್ಲಿ “BEERESH” ಎಂಬ ಹಚ್ಚೆ ಗುರುತುಗಳಿವೆ. ಮನೆಯಿಂದ ಹೊರಡುವ ವೇಳೆ ನೀಲಿ ಬಣ್ಣದ ಚೂಡಿದಾರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ.
ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಊರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




