Home Crime ಮಂಗಳೂರು: ಯುವಕ ನಾಪತ್ತೆ : ದೂರು ದಾಖಲು…!!

ಮಂಗಳೂರು: ಯುವಕ ನಾಪತ್ತೆ : ದೂರು ದಾಖಲು…!!

ಮಂಗಳೂರು: ಶಕ್ತಿನಗರದ ಕ್ಯಾಸ್ಟೊಲಿನೋ ಕಾಲನಿ ನಿವಾಸಿ, ಸ್ಪರ್ಶ್ ಭೂಷಣ್ ಸಿಂಗ್ (19) ಎಂಬಾತ ಮನೆಯಲ್ಲಿ ಜಗಳವಾಡಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು ಜೂ.29ರಂದು ಮನೆ ಬಿಟ್ಟು ಹೋದವ ಮರಳಿ ಬಂದಿಲ್ಲ ಎಂದು ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.

ಸುಮಾರು 5.4 ಅಡಿ ಎತ್ತರದ, ಎಣ್ಣೆಕಪ್ಪುಮೈಬಣ್ಣದ, ಸಪೂರ ಶರೀರದ ಈತ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ.

ಕಾಣೆಯಾದ ದಿನ ಕಪ್ಪುಬಣ್ಣದ ಟಿ-ಶರ್ಟ್, ಕ್ರೀಮ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಈತನ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.