ಕುಂದಾಪುರ: ಗುಜ್ಜಾಡಿ ನಾಯಕವಾಡಿ ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರಿಗೆ ಇದೀಗ ಸಂತಸದ ಸುದ್ದಿ.
ಬಹುದಿನಗಳಿಂದ ಎದುರಾಗಿದ್ದ ಕಾಯಂ ಶಿಕ್ಷಕಿ ನೇಮಕದ ನಿರೀಕ್ಷೆಗೆ ಇದೀಗ ತೆರೆ ಬಿದ್ದಿದೆ.
ನಾಯಕವಾಡಿ ಅಂಗನವಾಡಿ ಕೇಂದ್ರಕ್ಕೆ ಕಾಯಂ ಟೀಚರ್ ನೇಮಕಗೊಳಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು (DD) ಪ್ರೇಮ ಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ಮಕ್ಕಳ ಶಿಕ್ಷಣ ಮತ್ತು ಆರೈಕೆಯ ದೃಷ್ಟಿಯಿಂದ ಕಾಯಂ ಶಿಕ್ಷಕಿ ನೇಮಕವಾಗಬೇಕು ಎಂಬ ಪೋಷಕರ ನಿರೀಕ್ಷೆಗೆ ಇಲಾಖೆ ಸ್ಪಂದಿಸಿರುವುದು ಇದೀಗ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
“ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಮಾತಿಗೆ ತಕ್ಕಂತೆ, ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಮಕ್ಕಳ ಹಿತದೃಷ್ಟಿಯಿಂದ ಕ್ರಮ ಕೈಗೊಂಡಿರುವ DD ಪ್ರೇಮ ಮೂರ್ತಿ ಅವರ ಕಾರ್ಯಕ್ಕೆ ಮಕ್ಕಳ ಪೋಷಕರು ಹಾಗೂ ಗುಜ್ಜಾಡಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ, ಅದರ ನೇರ ಪ್ರಯೋಜನ ಜನಸಾಮಾನ್ಯರಿಗೆ ತಲುಪುತ್ತದೆ ಎಂಬುದಕ್ಕೆ ಗುಜ್ಜಾಡಿ ನಾಯಕವಾಡಿ ಅಂಗನವಾಡಿ ಕೇಂದ್ರದ ಈ ಬೆಳವಣಿಗೆ ಸಾಕ್ಷಿಯಾಗಿದೆ .



