ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಯುವಕನೊಬ್ಬ JCB ರಿಪೇರಿ ಮಾಡುತ್ತಿರುವಾಗ ಅದರ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ಯುವಕ ಚಿಂಟು ಚೌಹನ್ ಎಂದು ತಿಳಿಯಲಾಗಿದೆ.
ಪ್ರಕರಣದ ವಿವರ : ದಿನಾಂಕ 13/11/2025 ರಂದು 15:15 ಗಂಟೆಗೆ ಚಿಂಟು ಚೌಹಾಣ (26) ಇವರು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಇಂಡಸ್ಟೀಯಲ್ ಏರಿಯಾದಲ್ಲಿ ಇರುವ ವಿಶ್ವಾಸ್ ಗ್ಯಾರೇಜ್‌ನಲ್ಲಿ KA-08-M-5750 ನೇ ನಂಬ್ರದ JCB ವಾಹನವನ್ನು ರಿಪೇರಿ ಮಾಡುತ್ತಿರುವಾಗ ಗ್ಯಾರೇಜ್ ಮಾಲೀಕರಾದ ಲವೀನಾ ಪ್ರಮೀಳಾ ಡಿ’ಮೆಲ್ಲೊ ಇವರು ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ಕೆಲಸ ಮಾಡಿಸುತ್ತಿದ್ದು, ಈ ಸಮಯ KA-08-M-5750 ನೇ ನಂಬ್ರದ JCB ಆಪರೇಟರ್ ಸಾಗರ್ ಈತನು JCBಯ ಮುಂದಿನ ಬಕೆಟ್‌ನ್ನು ಎತ್ತಿಹಿಡಿದವನ್ನು ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ ಪರಿಣಾಮ JCB ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ JCBಯ ಮುಂದಿನ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಗಂಭೀರ ಗಾಯಗೊಂಡಿದ್ದು ನಂತರ ಕ್ರೇನ್ ಮೂಲಕ ಬೇರ್ಪಡಿಸಿ ಚಿಕಿತ್ಸೆಯ ಬಗ್ಗೆ ಕಾರ್ಕಳದ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಆತನನ್ನು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2025 ಕಲಂ:106 BNS ರಂತೆ ಪ್ರಕರಣ ದಾಖಲಾಗಿರುತ್ತದೆ .



