Home Karavali Karnataka ಉಡುಪಿ : ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯ ರಕ್ಷಣೆ…!!

ಉಡುಪಿ : ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯ ರಕ್ಷಣೆ…!!

ಉಡುಪಿ : ಅಸಹಾಯಕ ಸ್ಥಿತಿಯಲ್ಲಿದ್ದ, ಅಪರಿಚಿತ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ರಕ್ಷಿಸಿರುವ‌‌ ಘಟನೆ ಗುರುವಾರ ನಡೆದಿದೆ.

ಅಲೆವೂರು ಗುಡ್ಡೆಯಂಗಡಿ ಬಸ್ಸು ನಿಲ್ದಾಣದ ಬಳಿ ಮಹಿಳೆ‌ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಮಹಿಳೆಯನ್ನು ಸ್ಥಳೀಯ ಪಂಚಾಯತಿ ಸದಸ್ಯ ಜಲೇಶ್ ಶೆಟ್ಟಿಯವರು‌ ಗಮನಿಸಿ, ಒಳಕಾಡುವರಿಗೆ ‌ತಿಳಿಸಿದ್ದರು.‌

ತಕ್ಷಣ ನೆರವಿಗೆ ಬಂದ ಒಳಕಾಡುವರು ಮಹಿಳೆಯನ್ನು ರಕ್ಷಿಸಿ ಮಣಿಪಾಲ ಪೋಲಿಸ್ ಠಾಣೆಗೆ‌ ಒಪ್ಪಿಸಿದರು.‌

ಬಳಿಕ ರಕ್ಷಿಸಲ್ಪಟ್ಟ ಮಹಿಳೆಗೆ ನಿಟ್ಟೂರು ಸಖಿ ಕೇಂದ್ರದಲ್ಲಿ ಮುಖ್ಯ ಆರಕ್ಷಕಿ ಜ್ಯೋತಿ ನಾಯ್ಕ್ ಅವರು, ಒಳಕಾಡು ಅವರ ನೆರವಿನಿಂದ ಒದಗಿಸಿದರು.

ಮಹಿಳೆಯು ಹೆಸರು‌ ಬಸಂತಿ, ನಾಗಪುರದ ನಿವಾಸಿ ಎಂದು ಹೇಳಿಕೊಂಡಿದ್ದಾರೆ.