Home Crime ವೃದ್ಧೆಯ ಚಿನ್ನಾಭರಣ ದರೋಡೆಗೈದ ಪ್ರಕರಣ : ಇಬ್ಬರು ಆರೋಪಿಗಳ ಬಂಧನ…!!

ವೃದ್ಧೆಯ ಚಿನ್ನಾಭರಣ ದರೋಡೆಗೈದ ಪ್ರಕರಣ : ಇಬ್ಬರು ಆರೋಪಿಗಳ ಬಂಧನ…!!

ಕೊಣಾಜೆ: ಮುಡಿಪು ಕಾಯೆರ್ ಗೋಳಿ ಪ್ರದೇಶದಲ್ಲಿ 76ವರ್ಷದ ವೃದ್ದೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಬೊಕ್ಕಪಟ್ಟಣ ನಿವಾಸಿಗಳಾದ ಬಾಲಸುಬ್ರಹ್ಮಣ್ಯಂ (49) ಹಾಗೂ ಶ್ಯಾಮ್ ಕುಮಾರ್ (33) ಎಂದು ತಿಳಿದು ಬಂದಿದೆ.

ಶ್ಯಾಮ್ ಕುಮಾರ್ ಆಟೋ ರಿಕ್ಷಾ ಮಾಲಿಕನಾಗಿದ್ದು, ಮಣ್ಣಗುಡ್ಡದಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ.3ರಂದು ಮಧ್ಯಾಹ್ನ ಮುಡಿಪು ಕಾಯೆರ್‌ ಗೋಳಿಯ ಭವಾನಿ ಆಚಾರ್ಯ ಅವರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಇಬ್ಬರು ಅಪರಿಚಿತರು ಮನೆ ಬಾಡಿಗೆ ಕುರಿತು ವಿಚಾರಿಸುವ ನೆಪದಲ್ಲಿ ಬಾಗಿಲು ತಟ್ಟಿದ್ದರು. ವೃದ್ಧೆ ಬಾಗಿಲು ತೆರೆದ ತಕ್ಷಣ ಆರೋಪಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿ ಅವರನ್ನು ಕೆಳಕ್ಕೆ ತಳ್ಳಿಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಬಳೆಯನ್ನು ಕಿತ್ತು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

ದರೋಡೆಗೈಯಲಾದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ಸುಮಾರು 3 ಲಕ್ಷ ರೂ. ಎಂದು ತಿಳಿದುಬಂದಿದೆ.

ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.