Home Crime ಮೀನುಗಾರ ನೀರಿನಲ್ಲಿ ಮುಳುಗಿ ಮೃತ್ಯು…!!

ಮೀನುಗಾರ ನೀರಿನಲ್ಲಿ ಮುಳುಗಿ ಮೃತ್ಯು…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಉಪ್ಪುಂದ ಗ್ರಾಮದ ನಿವಾಸಿ ಡಿ. ನಾರಾಯಣ ಖಾರ್ವಿ (64) ಅವರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಯಡ್ತರೆ ಗ್ರಾಮದ ಅಂಕಣಹೊಳೆಯಲ್ಲಿ ನಡೆದಿದೆ.

ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದ ನಾರಾಯಣ ಖಾರ್ವಿ ಅವರು ಜೂನ್ 19ರಂದು ಬೆಳಿಗ್ಗೆ 6.30ಕ್ಕೆ ಅಂಕಣಹೊಳೆಗೆ ಮೀನು ಹಿಡಿಯಲು ತೆರಳಿದ್ದರು. ಆದರೆ ಮನೆಗೆ ವಾಪಸ್ಸು ಬಾರದೆ ಇದ್ದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದರು.

ಜೂನ್ 20ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಯಡ್ತರೆ ಗ್ರಾಮದ ಅಂಕಣಹೊಳೆಯಲ್ಲಿ ನಾರಾಯಣ ಖಾರ್ವಿಯವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಮೀನು ಹಿಡಿಯುವ ವೇಳೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಮೃತರ ಪುತ್ರ ರೋಹಿತ್ ನೀಡಿದ ದೂರಿನ ಆಧಾರದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 34/2026ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.