Home Karavali Karnataka ಮೂಡುಬೆಳ್ಳೆ : ಸನ್ ಶೈನ್ ಕೆಟರಿಂಗ್ ಮಾಲಕ ಸಂದೀಪ್ ಶೆಟ್ಟಿ ಹೃದಯಾಘಾತದಿಂದ ನಿಧನ…!!

ಮೂಡುಬೆಳ್ಳೆ : ಸನ್ ಶೈನ್ ಕೆಟರಿಂಗ್ ಮಾಲಕ ಸಂದೀಪ್ ಶೆಟ್ಟಿ ಹೃದಯಾಘಾತದಿಂದ ನಿಧನ…!!

ಮೂಡುಬೆಳ್ಳೆ: ಸನ್ ಶೈನ್ ಕೆಟರಿಂಗ್ ಮಾಲಕ ಸಂದೀಪ್ ಶೆಟ್ಟಿ(41) ಇಂದು ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೂಡುಬೆಳ್ಳೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ಶ್ಯಾಮಿಯಾನ ಮತ್ತು ಸನ್ ಶೈನ್ ಕೆಟರಿಂಗ್ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದರು.

ಅವಿವಾಹಿತರಾದ ಇವರು ತಾಯಿ, ಇಬ್ಬರ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ‌.

ಎಡ್ಮೇರ್ ನಿಸರ್ಗ ಯುವಕ ಮಂಡಲದ ಗೌರವಾಧ್ಯಕ್ಷರಾಗಿ, ಮೂಡುಬೆಳ್ಳೆ ಲಯನ್ಸ್ ಕ್ಲಬ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳುವಾಗಿ ಗುರುತಿಸಿಕೊಂಡಿದ್ದ ಅವರು ಎರು ಶ್ರೀ ಧೂಮಾವತಿ ದೈವಸ್ಥಾನದ ಸ್ಥಳ ವಂದಿಗರಾಗಿದ್ದು, ಎಡ್ಮೇರ್ ಜವಣೆರ್ ತಂಡವನ್ನು ಮುನ್ನಡೆಸಿ ಸಮಾಜ ಸೇವೆಯಲ್ಲಿ ಗುರುತಿಸಿ ಕೊಂಡಿದ್ದರು. ಮೃತರ ಅಂತ್ಯಕ್ರಿಯೆಯು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎರುಗುತ್ತು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.