Home Crime ಹಿರಿಯಡ್ಕ‌ : ಯುವಕನೋರ್ವ ನಾಪತ್ತೆ…!!

ಹಿರಿಯಡ್ಕ‌ : ಯುವಕನೋರ್ವ ನಾಪತ್ತೆ…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ‌ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವಕ ಫಕೀರೇಶ್‌ ದ್ಯಾಮಪ್ಪ ಮಾಳಗಿ ಎಂದು ತಿಳಿದು ಬಂದಿದೆ.

ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ದ್ಯಾಮಪ್ಪ ಬಸಪ್ಪ (52), ಹಾವೇರಿ ಜಿಲ್ಲೆ ಇವರ ಮಗ ಫಕೀರೇಶ್‌ ದ್ಯಾಮಪ್ಪ ಮಾಳಗಿ (27) ಇವರು ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಕೆಲಸ ಮಾಡಿಕೊಂಡಿದ್ದು ದಿನಾಂಕ 19/10/2025 ರಂದು ಹಬ್ಬ ಇರುವ ಕಾರಣ ಪಿರ್ಯಾದಿದಾರರು ಅತನ ಕೆಲಸದವರಾದ ಕುತುಬುದ್ದೀನ್‌ ಎಂಬುವವರಿಗೆ ದೂರವಾಣಿ ಕರೆ ಮಾಡಿ ಫಕೀರೇಶನನ್ನು ಊರಿಗೆ ಕಳುಹಿಸಿಕೊಡುವಂತೆ ತಿಳಿಸಿದ್ದು ಅದರಂತೆ ದಿನಾಂಕ 21/10/2025 ರಂದು ಅವರ ಕೆಲಸದವರು ಅವನಿಗೆ ಹಣ ಕೊಟ್ಟು ದಿನಾಂಕ 21/10/2025 ರಂದು ಮಧ್ಯಾಹ್ನ 1:00 ಗಂಟೆಗೆ ಕಾಜಿ ಇವರು ಹಿರಿಯಡ್ಕ ಬಸ್‌ ನಿಲ್ದಾಣದಲ್ಲಿ ಶಿವಮೊಗ್ಗ ಮಿನಿ ಬಸ್‌ನ್ನು ಹತ್ತಿಸಿ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಗ ದಿನಾಂಕ 21/10/2025 ರಂದು ಹಿರಿಯಡ್ಕ ಬಸ್‌ ನಿಲ್ದಾಣದಿಂದ ಹೊರಟವನು ಮನೆಗೆ ಬಾರದ ವಾಪಾಸು ಹಿರಿಯಡ್ಕಕ್ಕೂ ಹೋಗದೆ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2025 ಕಲಂ: MAN MISSING ರಂತೆ ಪ್ರಕರಣ ದಾಖಲಾಗಿರುತ್ತದೆ.