Home Crime ಸುರತ್ಕಲ್: ಅಪ್ರಾಪ್ತ ಬಾಲಕಿಗೆ ವೃದ್ದನಿಂದ ಲೈಂಗಿಕ ಕಿರುಕುಳ : ಪ್ರಕರಣ ದಾಖಲು…!!

ಸುರತ್ಕಲ್: ಅಪ್ರಾಪ್ತ ಬಾಲಕಿಗೆ ವೃದ್ದನಿಂದ ಲೈಂಗಿಕ ಕಿರುಕುಳ : ಪ್ರಕರಣ ದಾಖಲು…!!

ಸುರತ್ಕಲ್: ಇಲ್ಲಿನ ಚೇಳಾಯರು ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ‌ ಕಿರುಕುಳ ನೀಡಿದ್ದ ವೃದ್ಧನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಸುರತ್ಕಲ್ ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಎಂದು ತಿಳಿದು ಬಂದಿದೆ.

14 ವರ್ಷದ ಅಪ್ರಾಪ್ತ ಬಾಲಕಿ ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದಿಳಿದು ತನ್ನ ಮನೆಗೆ ಒಳ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆಯ ಎದುರು ಬದಿಯಿಂದ ಬಂದ ಅಪರಿಚಿತ ವ್ಯಕ್ತಿ ಆಕೆಯ ಕೈಹಿಡಿದು ಹಿಸುಕಿ ಮಾತನಾಡಿಸಿದ ಬಳಿಕ ಆಕೆಗೆ ಲೈಂಗಿಕ‌ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ 2025ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದು, ಆ ಬಳಿಕ ಬಾಲಕಿ ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದಳು. ಆದ್ದರಿಂದ ಆಕೆಯ ತಾಯಿ ವೈದ್ಯರ ಬಳಿ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ‌.

ಈ ಸಂಬಂಧ ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.