ಉಡುಪಿ : ಜಿಲ್ಲೆಯ ವಿವಿಧ ಠಾಣೆಗಳ್ಲಿ ಮೊಬೈಲ್ ಕಳೆದುಕೊಂಡು ಸಿ.ಇ.ಐ.ಆರ್ ಪೋರ್ಟ್‌ಲ್ ಮೂಲಕ ದೂರು ದಾಖಲಿಸಿದ್ದ ಮೊಬೈಲ್’ )ಗಳ ಪೈಕಿ ಕಳೆದ ಒಂದು ವಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿರುವ ಮೊಬೈಲ್‌ಗಳನ್ನು ಜಿಲ್ಲೆಯ ಎಲ್ಲಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಮೊಬೈಲ್ ಕಳೆದುಕೊಂಡಿದ್ದ ಮೂಲ ವಾರಸುದಾರರಿಗೆ ಅವರ ಮೊಬೈಲ್’ನ್ನು ಸೋಮವಾರ ಹಿಂತಿರುಗಿಸಲಾಯಿತು. ಒಟ್ಟು 241 ಮೊಬೈಲ್’ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.






