Home Karavali Karnataka ಕಾಪು ತಾಲೂಕಿನ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿರುವ JAI HIND TUBES PVT LTD ಕಂಪನಿಯಿಂದ ಸ್ಥಳೀಯ...

ಕಾಪು ತಾಲೂಕಿನ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿರುವ JAI HIND TUBES PVT LTD ಕಂಪನಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾಗು ಪರಿಸರಕ್ಕೆ ಅಗುತಿರುವ ಸಮಸ್ಯೆಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕಂಪನಿ ವಿರುದ್ಧ ಕಾನೂನು ಕ್ರಮ ಕೃೆಗೂಳ್ಳುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಮನವಿ‌…!!

ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ. ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿರುವ ಸ್ಟೀಲ್ ಉತ್ಪಾದನೆಯನ್ನು ಮಾಡುವ JAI HIND TUBES PVT.LTD. ಕಂಪನಿಯು ಕಳೆದ 2 ವರ್ಷಗಳಿಂದ ಕಾರ್ಯ ನಿರ್ವಹಿಸುತಿದ್ದು, ಈ ಕಂಪನಿಯಿಂದ ಹೊರಸೂಸುವ ರಾಸಾಯನಿಕ ಯುಕ್ತ ಹೂಗೆಯಿಂದ ಸ್ಥಳೀಯ ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆಗಳು ಹಾಗು ಉಸಿರಾಟದ ಸಮಸ್ಯೆಗಳು ಉಂಟಾಗಿದೆ.

ಸ್ಥಳೀಯ ಜನರ ಅರೋಗ್ಯ ಸಮಸ್ಯೆಗಳು ದಿನದಿಂದ ದಿನ ಹದಗೆಟ್ಟುತಿದ್ದೆ..ಅದ್ದಲ್ಲದೇ ಕಂಪನಿಯಿಂದ ಬಿಡುತಿರುವ ಕಲುಷಿತ ನೀರನ್ನು ಬೇಸಾಯದ ಗದ್ದೆಗಳಿಗೆ ಬಿಡುವುದರಿಂದ ಬೆಳೆಗಳು ನಾಶ ವಾಗುತಿದೆ…ವ್ಯವಸಾಯವನ್ನೆೇ ನಂಬಿ ಕುಟುಂಬದ ಜೀವನವನ್ನು ಸಾಗಿಸುತಿರುವ ಕೃಷಿಕರಿಗೆ ಕಷ್ಟಕರ ಪರಿಸ್ಥಿತಿ ಎದುರಾಗಿದೆ‌…ಈ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೊಡಾ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ..ಈ ಸಮಸ್ಯೆಗಳ ಬಗ್ಗೆ ಯಾರು ಕೇಳುವವರಿಲ್ಲದೇ ಬಡ ಕುಟುಂಬದ ಜನರ ಪಾಡು ಅಧೋಗತಿಯಾಗಿದೆ…ಅದ್ದರಿಂದ ಕಂಪನಿಯ ಸುತ್ತಮುತ್ತ ಬದುಕುತಿರುವ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ, ಜೃೆ ಹಿಂದ್ ಟ್ಯೊಬ್ಸ್ ಕಂಪನಿಯಿಂದ ಸ್ಥಳೀಯಾ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಹಾಗು ಪರಿಸರ ಮಾಲಿನ್ಯ ಯಾಗದಂತೆ ಸೂಕ್ತ ಕಾನೂನು ಕ್ರಮ ಕೃೆಗೂಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಬಗ್ಗೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ತಕ್ಷಣವೇ ಪರಿಸರ ಇಲಾಖೆಧಿಕಾರಿಗಳ ಜೊತೆ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು…