ಕಾರ್ಕಳ : ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪರ್ಪಲೆ ಕೇಮಾರು ಎಂಬಲ್ಲಿ ತಮಿಳುನಾಡು ನೋಂದಣಿಯ ಲಾರಿಗೆ ಕಲ್ಲೆಸೆದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂದಿತ ಆರೋಪಿಗಳನ್ನು ದುರ್ಗಾ ಪ್ರಸಾದ್@ ಪ್ರಸಾದ್, ಬೆಳುವಾಯಿಯ ಪ್ರಮೋದ(34), ಬಂಟ್ವಾಳ ಅರಳದ ಶಿವರಾಜ್ @ಶಿವ(30) ಎಂದು ಗುರುತಿಸಲಾಗಿದೆ.
ಮೇ 2 ರಂದು ಬೆಳಿಗ್ಗೆ 11:00 ಗಂಟೆಗೆ ಮಣಿಕಂಡನ್ ಎಂಬುವವರು TN 31 BE2786ನೇ ನಂಬ್ರದ ಮೀನು ಲಾರಿಯಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಲೋಡ್ ಮಾಡಿಕೊಂಡು ತಮಿಳನಾಡಿಗೆ ಹೊರಟಿದ್ದು, ಮಧ್ಯಾಹ್ನ ಸುಮಾರು 12:25 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಕೇಮಾರು ಪರ್ಪಲೆ ಎಂಬಲ್ಲಿ ಕಾರ್ಕಳ ಕಡೆಗೆ ಬರುತ್ತಿರುವಾಗ ಆರೋಪಿಗಳು ಉದ್ದೇಶಪೂರ್ವಕವಾಗಿ ಕಾರ್ಕಳ ಕಡೆಯಿಂದ ಎರಡು ಮೋಟಾರ್ ಸೈಕಲ್‌ನಲ್ಲಿ ಮುಸುಕುದಾರಿಯಾಗಿ ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಮೀನು ತುಂಬಿದ ಲಾರಿ ತಮಿಳುನಾಡು ರಾಜ್ಯ ಲಾರಿ ಎಂದು ತಿಳಿದು ಲಾರಿಯ ಗ್ಲಾಸಿಗೆ ಕಲ್ಲನ್ನು ಹೊಡೆದು ಪರಾರಿಯಾಗಿರುತ್ತಾರೆ.
ಇದರ ಪರಿಣಾಮ ಲಾರಿಯ ಎದುರುಗಡೆ ಗ್ಲಾಸ್ ಒಡೆದು ಹೋಗಿ 15,000/- ರೂ ನಷ್ಟವುಂಟಾಗಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.