ಮಣಿಪಾಲ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಪೆಸ್ಟ್ ಕಂಟ್ರೋಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಶೆಟ್ಟಿಗಾರ್ (40) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಅತ್ರಾಡಿ ಗ್ರಾಮದ ಲೋಲಾಕ್ಷಿ ಶೆಟ್ಟಿಗಾರ್ (40) ಅವರು ನೀಡಿದ ಮಾಹಿತಿಯಂತೆ, ಅರುಣ್ ಶೆಟ್ಟಿಗಾರ್ ಅವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜೂನ್ 16ರಂದು ರಾತ್ರಿ 8 ಗಂಟೆಯಿಂದ ಜೂನ್ 17ರಂದು ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಪೆಸ್ಟ್ ಕಂಟ್ರೋಲ್ ಗೋಡೌನ್‌ನಲ್ಲಿದ್ದ ಪ್ಯಾನ್‌ನ ಕಬ್ಬಿಣದ ಹುಕ್ಕಿಗೆ ಬೈರಸನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 33/2026ರಡಿ ಕಲಂ 194 ಬಿಎನ್‌ಎಸ್‌ಎಸ್ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




