ಕಾರ್ಕಳ: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2026ರ ಫಲಿತಾಂಶದಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜು ಗಮನಾರ್ಹ ಸಾಧನೆ ದಾಖಲಿಸಿದೆ. ಕಾಲೇಜಿನ 30 ವಿದ್ಯಾರ್ಥಿಗಳು ರಾಜ್ಯದ ಟಾಪ್-100 ರ‍್ಯಾಂಕ್‌ಗಳೊಳಗೆ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ನಾಗದೇವ್ ಎಂ.ಜಿ. 28ನೇ ರ‍್ಯಾಂಕ್ ಪಡೆದು ಕಾಲೇಜಿನ ಅತ್ಯುತ್ತಮ ಸಾಧಕರಾಗಿ ಹೊರಹೊಮ್ಮಿದ್ದಾರೆ. ಸಂವಿತ್ ಅಮಿತ್ 55ನೇ, ಧ್ರುವ ವಿ.ಬಿ. 71ನೇ ಹಾಗೂ ತೇಜಸ್ ಆರ್.ಬಿ. 82ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 22 ವಿದ್ಯಾರ್ಥಿಗಳು 1000 ರ‍್ಯಾಂಕ್ ಒಳಗೆ ಹಾಗೂ 43 ವಿದ್ಯಾರ್ಥಿಗಳು 2000 ರ‍್ಯಾಂಕ್ ಒಳಗೆ ಸ್ಥಾನ ಪಡೆದಿದ್ದಾರೆ.
ಕೃಷಿ ವಿಭಾಗದಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಧ್ರುವ ವಿ.ಬಿ. 11ನೇ, ತೇಜಸ್ ಆರ್.ಬಿ. 17ನೇ, ತೇಜಸ್ ಹೆಗಡೆ ಎಚ್.ಡಿ. 53ನೇ, ಲೇಖನ್ ಕಾರಿಯಪ್ಪ 69ನೇ ಹಾಗೂ ಪ್ರಣಮ್ಯಾ ಭಟ್ 90ನೇ ರ‍್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.









ಪಶುವೈದ್ಯಕೀಯ ವಿಭಾಗದಲ್ಲಿ ತೇಜಸ್ ಆರ್.ಬಿ. 102ನೇ, ಧ್ರುವ ವಿ.ಬಿ. 120ನೇ ಹಾಗೂ ಮೋಕ್ಷ ವಿ.ಎಂ. 197ನೇ ರ‍್ಯಾಂಕ್ ಪಡೆದರೆ, ನರ್ಸಿಂಗ್ ವಿಭಾಗದಲ್ಲಿಯೂ ಇದೇ ವಿದ್ಯಾರ್ಥಿಗಳು ಉತ್ತಮ ಸ್ಥಾನ ಗಳಿಸಿ ಕಾಲೇಜಿನ ಸಾಧನೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಒಟ್ಟಾರೆ ಕೆಸಿಇಟಿ ಫಲಿತಾಂಶದಲ್ಲಿ ಕಾಲೇಜಿನ 290 ವಿದ್ಯಾರ್ಥಿಗಳು 1000 ರ‍್ಯಾಂಕ್ ಒಳಗೆ ಹಾಗೂ 521 ವಿದ್ಯಾರ್ಥಿಗಳು 2000 ರ‍್ಯಾಂಕ್ ಒಳಗೆ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಇದರೊಂದಿಗೆ ಕ್ರಿಯೇಟಿವ್ ಕಾಲೇಜು ಕಳೆದ ಐದು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸುತ್ತಿರುವ ತನ್ನ ಶೈಕ್ಷಣಿಕ ಪರಂಪರೆಯನ್ನು ಮುಂದುವರಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಕಾಂತರಾಜ್, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.




