ಬೈಂದೂರು: ಬೈಂದೂರು ಗ್ರಾಮದ ನಿವಾಸಿ ಪ್ರತಾಪ್ (31) ಅವರ ಅಕ್ಕ ಪುಷ್ಪ (36) ಅವರು ಜೀವನದಲ್ಲಿ ಯಾವುದೋ ವಿಷಯಕ್ಕೆ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮೂಲತಃ ನೈಕಂಬಿ ಗಿರೀಶ್ ಅವರನ್ನು ವಿವಾಹವಾಗಿ ಮುಂಬೈನಲ್ಲಿ ವಾಸವಾಗಿದ್ದ ಪುಷ್ಪ ಅವರು ಸುಮಾರು ಒಂದು ತಿಂಗಳ ಹಿಂದೆ ರಜೆಯ ನಿಮಿತ್ತ ಬೈಂದೂರಿಗೆ ಬಂದು ತಮ್ಮ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಜೂನ್ 2ರಂದು ಸಂಜೆ ಸುಮಾರು 7:15 ಗಂಟೆಗೆ ಮನೆಯವರು ಹೊಸ ಮನೆಯಲ್ಲಿ ಇದ್ದ ವೇಳೆ, ಪುಷ್ಪ ಅವರು ಈ ಹಿಂದೆ ವಾಸವಾಗಿದ್ದ ಹಳೆಯ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೇ ಕುಟುಂಬದವರು ಅವರನ್ನು ಕೆಳಗಿಳಿಸಿ ಚಿಕಿತ್ಸೆಗೆಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ರಾತ್ರಿ 9:05 ಗಂಟೆಗೆ ವೈದ್ಯರು ಪರೀಕ್ಷಿಸಿದಾಗ, ಚಿಕಿತ್ಸೆಗೆ ಕರೆತರುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




