Home Latest ನಗರದ ಪ್ರಮುಖ ತೋಡುಗಳ ಹೂಳು ತೆರವು ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ…!!

ನಗರದ ಪ್ರಮುಖ ತೋಡುಗಳ ಹೂಳು ತೆರವು ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ…!!

ಉಡುಪಿ : ನಗರಸಭಾ ವ್ಯಾಪ್ತಿಯ ಕಡಿಯಾಳಿ, ಗುಂಡಿಬೈಲು, ಬನ್ನಂಜೆ ವಾರ್ಡಿನ ಪ್ರಮುಖ ತೋಡುಗಳ ಹೂಳು ತೆರವು ಸ್ಥಳಗಳಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೃತಕ ನೆರೆ ತಪ್ಪಿಸಲು ತೋಡುಗಳ ಹೂಳು ತೆರವು ಈಗಾಗಲೇ ನಡೆಯುತ್ತಿದ್ದು ಬಾಕಿ ಇರುವ ತೋಡುಗಳ ಹೂಳು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.

ಕಡಿಯಾಳಿ, ಕಲ್ಸಂಕ, ಗುಂಡಿಬೈಲು, ಮಠದಬೆಟ್ಟು, ಬನ್ನಂಜೆ ಗರಡಿ ಬಳಿಯ ತೋಡುಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ಶೇಖರಣೆಯಾಗಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದ್ದು, ಈಗಾಗಲೇ ಅತೀ ಶೀಘ್ರದಲ್ಲಿ ಮಳೆ ಪ್ರಾರಂಭವಾಗಲಿದ್ದು ಆದ್ಯತೆಯ ಮೇರೆಗೆ ಹೂಳು ತೆರವಿಗೆ ಕ್ರಮ ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ನಗರಸಭೆ ಮಾಜಿ ಸದಸ್ಯರಾದ ಶ್ರೀ ಹರೀಶ್ ಶೆಟ್ಟಿ, ಶ್ರೀ ಹರೀಶ್ ರಾಮ್ ಬನ್ನಂಜೆ, ಸ್ಥಳೀಯ ಮುಖಂಡರಾದ ಶ್ರೀ ಸತೀಶ್ ಕುಲಾಲ್ ಕಡಿಯಾಳಿ, ಶ್ರೀ ಆನಂದ ಮಠದಬೆಟ್ಟು, ಶ್ರೀ ಉದಯ ಮಠದಬೆಟ್ಟು, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ದುರ್ಗಾ ಪ್ರಸಾದ್, ಪರಿಸರ ಅಧಿಕಾರಿ ಶ್ರೀ ರವಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.