Home Crime ವಾಟ್ಸಪ್‌ನಲ್ಲಿ ಮದುವೆ ಇನ್ವಿಟೇಷನ್‌ ಓಪನ್‌ ಮಾಡಿ ಅಕೌಂಟ್‌ನಲ್ಲಿದ್ದ ಹಣ ಕಳೆದುಕೊಂಡ ವ್ಯಕ್ತಿ….!!

ವಾಟ್ಸಪ್‌ನಲ್ಲಿ ಮದುವೆ ಇನ್ವಿಟೇಷನ್‌ ಓಪನ್‌ ಮಾಡಿ ಅಕೌಂಟ್‌ನಲ್ಲಿದ್ದ ಹಣ ಕಳೆದುಕೊಂಡ ವ್ಯಕ್ತಿ….!!

ಗುರುಗ್ರಾಮ : ವಾಟ್ಸಾಪ್‌ನಲ್ಲಿ ಬಂದ ಮದುವೆ ಇನ್ವಿಟೇಷನ್‌ ಓಪನ್‌ ಮಾಡಿ ವ್ಯಕ್ತಿಯೊಬ್ಬ 97 ಸಾವಿರ ರೂ ಕಳೆದುಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಅಪರಿಚಿತ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ ಖಂಡಿತವಾಗಿಯೂ ಓಪನ್‌ ಮಾಡಬೇಡಿ. ಅಂತಹ ಲಿಂಕ್‌ಗಳನ್ನು ಓಪನ್‌ ಮಾಡುವುದರ ಮೂಲಕ ಸೈಬರ್‌ ವಂಚಕರು ನಿಮ್ಮ ಖಾತೆಯನ್ನು ಹಣ ದೋಚುತ್ತಾರೆ.

ವಿಷ್ಣು ಗಾರ್ಡನ್‌ ನಿವಾಸಿ ವಿನೋದ್‌ ಕುಮಾರ್‌ ಅವರ ಮೊಬೈಲ್‌ಗೆ ವಾಟ್ಸಪ್‌ನಲ್ಲಿ ಸೆ.4 ರಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಬಂದಿತ್ತು. ಇದು ಏನು ಅಂತ ನೋಡಲು ಲಿಂಕ್‌ ಕ್ಲಿಕ್‌ ಮಾಡಿದಾಗ ಅವರಿಗೆ ತಿಳಿಯದಂತೆ ಫೋನ್‌ ಹ್ಯಾಕ್‌ ಆಗಿ, ಮೂರು ಅನಧಿಕೃತ ವಹಿವಾಟು ನಡೆದಿದೆ. ಬ್ಯಾಂಕ್‌ ಖಾತೆಯಿಂದ 97 ಸಾವಿರ ರೂ. ತೆಗೆದುಕೊಂಡಿದ್ದರು.

ಈ ಕುರಿತು ಗುರುಗ್ರಾಮ ಪೊಲೀಸರಿಗೆ ದೂರನ್ನು ಕುಮಾರ್‌ ನೀಡಿದ್ದು, ಪೊಲೀಸರು ಕೇಸು ದಾಖಲು ಮಾಡಿ ತನಿಖೆ ಆರಂಭ ಮಾಡಿದ್ದಾರೆ.