Home Crime ಶಾನ್ಕಟ್ಟು ರಸ್ತೆ ಜಂಕ್ಷನ್‌ನಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು…!!

ಶಾನ್ಕಟ್ಟು ರಸ್ತೆ ಜಂಕ್ಷನ್‌ನಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು…!!

ಶಂಕರನಾರಾಯಣ: ಕುಂದಾಪುರ-ಅಂಪಾರು ರಸ್ತೆಯ ಮೂಡುಬಗೆ ಬಾಳ್ಕಟ್ಟು ಸೇತುವೆ ಸಮೀಪದ ಶಾನ್ಕಟ್ಟು ರಸ್ತೆ ಜಂಕ್ಷನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಬಸವ ನಾಯ್ಕ (80) ಎಂದು ಗುರುತಿಸಲಾಗಿದೆ. ಅವರು ಮೇ 29ರಂದು  ಬೈಕ್  ಕುಂದಾಪುರ-ಅಂಪಾರು ರಸ್ತೆಯಿಂದ ಶಾನ್ಕಟ್ಟು ರಸ್ತೆಗೆ ತೆರಳಲು ಬಲಭಾಗದ ಇಂಡಿಕೇಟರ್ ನೀಡಿ ರಸ್ತೆ ದಾಟುತ್ತಿದ್ದ ವೇಳೆ, ಸಿದ್ದಾಪುರ ಕಡೆಯಿಂದ ಬಂದ   ಎಸ್.ಜಿ.ಎಂ.ಟಿ. ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಬಸವ ನಾಯ್ಕ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಬಲಗಾಲು, ಎರಡೂ ಕೈಗಳು ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಸ್ಥಳದಲ್ಲಿದ್ದ ಪ್ರೇಮಾನಂದ ಶೆಟ್ಟಿ, ಅಂಪಾರು ಅಶೋಕ್ ನಾಯ್ಕ ಹಾಗೂ ಸಾರ್ವಜನಿಕರು ಗಾಯಾಳುವನ್ನು ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಸವ ನಾಯ್ಕ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಬಸ್ ಚಾಲಕ ಅಶೋಕ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.