Home Crime ಮುಂಡ್ಕೂರು: ಕಾರು-ರಿಕ್ಷಾ ಢಿಕ್ಕಿ : ರಿಕ್ಷಾ ಪ್ರಯಾಣಿಕ ಸಾವು..!!

ಮುಂಡ್ಕೂರು: ಕಾರು-ರಿಕ್ಷಾ ಢಿಕ್ಕಿ : ರಿಕ್ಷಾ ಪ್ರಯಾಣಿಕ ಸಾವು..!!

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾರು ಮತ್ತು ಆಟೋರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪ್ರಯಾಣಿಕ ಶ್ರೀಕಾಂತ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಿಕ್ಷಾ ಚಾಲಕ ಮಹಮ್ಮದ್ ಕೈಫ್‌ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತದಲ್ಲಿ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದರೆ, ಕಾರು ಭಾಗಶಃ ಹಾನಿಯಾಗಿದ್ದು, ಕಾರು ಚಾಲಕ ಸಚ್ಚೇರಿಪೇಟೆಯ ಅನಂತ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ತಿರುವಿನಲ್ಲಿ ನಡೆದ ಅಪಘಾತಕ್ಕೆ ರಿಕ್ಷಾ ಚಾಲಕನ ಅತೀ ವೇಗ ಮತ್ತು ಅಜಾಗರುಕತೆಯೇ ಕಾರಣ ಎನ್ನಲಾಗಿದೆ. ಕೂಡಲೇ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಸಂಚಾರ ಸುಗಮಗೊಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಯಾಣಿಕ ಮೃತ ಶ್ರೀಕಾಂತ್ ತನ್ನೊಟ್ಟಿಗೆ ನಾಯಿ ಮರಿಯೊಂದನ್ನು ಎಲ್ಲಿಗೋ ಕೊಂಡು ಹೋಗುತ್ತಿದ್ದು, ಸದ್ಯ ನಾಯಿ ಮರಿ ಅಪಘಾತದ ಸ್ಥಳದಲ್ಲಿ ಅನಾಥವಾಗಿದೆ ಎನ್ನಲಾಗಿದೆ.