Home Crime ಕುಂದಾಪುರ : ಕೋಳಿ‌‌ ಅಂಕ : ನಾಲ್ಕು ಮಂದಿ ವಶಕ್ಕೆ…!!

ಕುಂದಾಪುರ : ಕೋಳಿ‌‌ ಅಂಕ : ನಾಲ್ಕು ಮಂದಿ ವಶಕ್ಕೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅಕ್ರಮವಾಗಿ ಕೋಳಿ‌ ಅಂಕ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸರು ದಾಳಿ ನಡೆಸಿ 1) ರಾಜು ಪೂಜಾರಿ, 2) ಸುಂದರ, 3) ನಾರಾಯಣ, 4) ಮಂಜುನಾಥ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ವಿವರ :  ದಿನಾಂಕ: 25.09.2025 ರಂದು ಚಂದ್ರಕಲಾ ಮ ಪತ್ತಾರ ಪಿಎಸ್‌ ಐ (ತನಿಖೆ) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವಾಗ 16:15 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಕೌಂಜೂರು ಕೊಡ್ಗಿ ಬಚ್ಚಲು ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸುವರೇ 17:00 ಗಂಟೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ 4 ಜನರನ್ನು ಹಿಡಿದುಕೊಂಡಿದ್ದು ಉಳಿದವರು ಹಾಡಿಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ನಂತರ ಸಿಕ್ಕ 4 ಜನರಾದ 1) ರಾಜು ಪೂಜಾರಿ, 2) ಸುಂದರ, 3) ನಾರಾಯಣ, 4) ಮಂಜುನಾಥ ಎಂಬವರನ್ನು ವಶಕ್ಕೆ ಪಡೆದು 1) ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದವರ ಬಳಿಯಿದ್ದ ಒಟ್ಟು 3,150/- ರೂಪಾಯಿ, 2) ಜೀವಂತ ಕೋಳಿ ಹುಂಜ-8, 3) ಕೋಳಿ ಬಾಳು-02 4) ಕೋಳಿ ಕಾಲಿಗೆ ಬಾಳು ಕಟ್ಟಲು ಬಳಸಿದ ಹಗ್ಗ-02 ನೇದನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು ಆರೋಪಿತರುಗಳು ತಮ್ಮ – ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸಿದ ಬಗ್ಗೆ ಆಪಾದಿತರ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2025 ಕಲಂ: 87, 93 KP Act & ಕಲಂ:11(1)(a) ಪ್ರಾಣಿ ಹಿಂಸೆ ತಡೆ ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.