ಬಂಟ್ವಾಳ : ಇಂಟರ್ ಲಾಕ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಭಾನುವಾರ ತೆಂಕ ಬೆಳ್ಳೂರು ಗ್ರಾಮದ ಕೊಪ್ಪಳ ಪ್ರದೇಶದಲ್ಲಿ ನಡೆದಿದೆ.
ಕಲ್ಪನೆಯಿಂದ ಮುಂದೆ ಇಳಿಜಾರು ಪ್ರದೇಶದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇಳಿಜಾರು ಪ್ರದೇಶದ ಜೊತೆಗೆ ಲಾರಿಯಲ್ಲಿ ಲೋಡ್ ತುಂಬಿದ್ದ ಕಾರಣ ಚಾಲಕರಿಗೆ ವಾಹನದ ಮೇಲೆ ನಿಯಂತ್ರಣ ಸಾಧಿಸಲಾಗಿಲ್ಲ. ಹೀಗಾಗಿ ಲಾರಿ ಪಲ್ಟಿಯಾಗಿದೆ ಎಂದು ಇಲ್ಲಿನ ಅಂಗಡಿ ಮಾಲಕ ಆನಂದ ಎಂಬವರು ಹೇಳಿದ್ದಾರೆ.
ಚಾಲಕನ ತಲೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸಮೀಪದಲ್ಲಿದ್ದ ಮನೆಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.




