Home Crime ಜಿಂಕೆ ಮಾಂಸ ಮಾರಾಟ: ಮೂವರು ಆರೋಪಿಗಳ ಬಂಧನ

ಜಿಂಕೆ ಮಾಂಸ ಮಾರಾಟ: ಮೂವರು ಆರೋಪಿಗಳ ಬಂಧನ

ಭದ್ರಾವತಿ: ಜಿಂಕೆ ಮಾಂಸ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಾಗೂ 20 ಕೆ.ಜಿ ಜಿಂಕೆ ಮಾಂಸವನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

 

ಬಂಧಿತ ಆರೋಪಿಗಳು ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖ‌ರ್, ಹೊಸ ಸಿದ್ದಾಪುರ ಮೂರ್ತಿ ಎಂದು ತಿಳಿದು ಬಂದಿದೆ.

 

ಪ್ರಮುಖ ಆರೋಪಿ ಕಾಚಗೊಂಡನಹಳ್ಳಿಯ ಅರುಮುಗ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

 

ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಮಿಲಿಟರಿ ಕ್ಯಾಂಪ್ ನ ಬಸ್ ನಿಲ್ದಾಣದ ಸಂತೆ ಮೈದಾನದ ಬಳಿ ಮಾಂಸದ ಜೊತೆಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.