Home Crime ಅಕ್ರಮ ಮರಳು ಸಾಗಾಟ : ಮರಳು ಸಹಿತ ಟಿಪ್ಪರ್ ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಮರಳು ಸಹಿತ ಟಿಪ್ಪರ್ ವಶಕ್ಕೆ…!!

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವಾಗ ಪೊಲೀಸರು ಮರಳು ಸಹಿತ ಟಿಪ್ಪರ್  ವಶಪಡಿಸಿಕೊಂಡಿದ್ದಾರೆ.

ಸಂತೋಷ ಹಾಗೂ ಅರಣ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ : ದಿನಾಂಕ 19/09/2025 ರಂದು ಯಡ್ತಾಡಿ ಕಡೆಯಿಂದ ಸೈಬ್ರಕಟ್ಟೆ ಕಡೆಗೆ ಅಕ್ರಮವಾಗಿ ಟಿಪ್ಪರ್ ನಲ್ಲಿ ಮರಳು ಸಾಗಿಸಿಕೊಂಡು ಕೋಟ ಕಡೆಗೆ ಬರುತ್ತಿರುವುದಾಗಿ ಸುಧಾಪ್ರಭು ಪೊಲೀಸ್ ನಿರೀಕ್ಷಕರು (ತನಿಖೆ),ಕೋಟ ಪೊಲೀಸ್ ಠಾಣೆ ಇವರಿಗೆ ಮಾಹಿತಿ ಬಂದ ಮೇರೆಗೆ 13:30 ಗಂಟೆಗೆ ಸೈಬ್ರಕಟ್ಟೆ ಕಿರಿಯ ಪ್ರಾಥಮಿಕ ಶಾಲೆ ಸಮೀಪ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಯಡ್ತಾಡಿ ಕಡೆಯಿಂದ ಸೈಬ್ರಕಟ್ಟೆ ಮಾರ್ಗವಾಗಿ ಕೋಟ ಮೂರು ಕೈ ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರನ್ನು ನಿಲ್ಲಿಸಿ ಚಾಲಕನ ಬಳಿ ವಿಚಾರಿಸಿದಲ್ಲಿ ತಾನು ಯಡ್ತಾಡಿ ಅಲ್ತಾರಿನಲ್ಲಿರುವ ಅರುಣ್ ರವರ ಧಕ್ಕೆಯಿಂದ ಮರಳನ್ನು ತುಂಬಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದು ಈ ಬಗ್ಗೆ ಯಾವುದೇ ಪರವಾನಿಗೆ ಇದೆಯೇ ಎಂದು ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುತ್ತಾರೆ. ಟಿಪ್ಪರ್ ನಂಬ್ರ ನೋಡಲಾಗಿ KA-20-B-3400 ಆಗಿದ್ದು ಸದ್ರಿ ಟಿಪ್ಪರ್ ನಲ್ಲಿ 3 ಟನ್ ನಷ್ಟು ಮರಳು ಇದ್ದು , ಟಿಪ್ಪರ್ ಚಾಲಕ ಸಂತೋಷ ಹಾಗೂ ಅರುಣ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಸರ್ಕಾರಿ ಜಾಗದಿಂದ ಲಾಭಗಳಿಸುವ ಉದ್ದೇಶಗೋಸ್ಕರ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸ್ವಂತ ಲಾಭಗೋಸ್ಕರ ಬೇರೆಯವರಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 166/2025 ಕಲಂ: 303 (2), RW 3 (5) B.N.S. & U/S 4, 4(1A), 21 M.M.R.D. Act ರಂತೆ ಪ್ರಕರಣ ದಾಖಲಾಗಿರುತ್ತದೆ.