ಸುಳ್ಯ; ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತೆಂಗಿನಕಾಯಿ ತೆಗಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ.
ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.