ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿ ಹೊಸಮನೆ ನಿವಾಸಿ ಶೇಖರ ಪೂಜಾರಿ (72) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮೃತರ ಪುತ್ರ ನಿತೇಶ್ (37) ನೀಡಿದ ಮಾಹಿತಿಯಂತೆ, ಶೇಖರ ಪೂಜಾರಿಯವರು ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಮೇ 15ರಂದು ಮನೆಯಲ್ಲಿ ದೈವದ ತಂಬಿಲ ಸೇವೆ ನಡೆದಿತ್ತು. ಆ ದಿನ ಅವರು ಹೆಚ್ಚು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಮೇ 15ರ ರಾತ್ರಿ 11 ಗಂಟೆಯಿಂದ ಮೇ 16ರ ಬೆಳಗ್ಗೆ 6 ಗಂಟೆಯ ಮಧ್ಯೆ ಯಾವುದೋ ಕಾರಣಕ್ಕೆ ಮನನೊಂದು, ತಮ್ಮ ಕೊಟ್ಟಿಗೆಯ ಹೊರಭಾಗದಲ್ಲಿದ್ದ ಮರದ ಪಕ್ಕಾಸಿಗೆ ಹುರಿಹಗ್ಗ ಕಟ್ಟಿ, ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




