ಉಡುಪಿ : ಶ್ರೀ ನಾರಾಯಣ ಗುರುಗಳ ಆಶಯದಂತೆ ಶ್ರೀ ನಾರಾಯಣ ಗುರು ಉದ್ಯಾನವನ ನಿರ್ಮಾಣ ಒಂದು ಐತಿಹಾಸಿಕ ನಿರ್ಧಾರವಾಗಿದೆ. ಶ್ರೀ ನಾರಾಯಣ ಗುರು ಯುವ ವೇದಿಕೆಯ ಇಂತಹ ಸಮಾಜಮುಖಿ ಕೆಲಸಗಳು ಸಮಾಜಕ್ಕೂ ಕೂಡ ಉತ್ತಮ ಸಂದೇಶವಾಗಿದೆ. ಜಾತಿಪೀಡಿತ ಸಮಾಜದಲ್ಲಿ ಸಾಮಾಜಿಕ ಸಮಾನತೆಯ ಅಭಿವೃದ್ಧಿಗಳು ಸಮಾಜದ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇಂತಹ ಕೆಲಸಗಳ ಮೂಲಕ ಸಮಾಜದಲ್ಲಿನ ತಾರತಮ್ಯಗಳು ಕೂಡ ದೂರವಾಗಲಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಶ್ರೀ ನಾರಾಯಣ ಗುರುಗಳ ಸಮಾನತೆಯ ಸಂದೇಶ ಸಾರುವ ಮತ್ತು ಸಾಮರಸ್ಯದ ಸಂದೇಶ ಸಾರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇವರ ಮುತುವರ್ಜಿಯಲ್ಲಿ ಉಡುಪಿ ಬಲಾಯಿಪಾದೆ ಬಳಿ ಕುತ್ಪಾಡಿ ಗರಡಿ ರಸ್ತೆಯಲ್ಲಿ ರೂಪುಗೊಂಡಿರುವ 108 ಶ್ರೀ ಗಂಧದ ಮರಗಳ ನಡುವೆ ವಿಶೇಷವಾಗಿ ವಿನ್ಯಾಸಗೊಂಡಿರುವ ಶ್ರೀ ನಾರಾಯಣ ಗುರು ಉದ್ಯಾನವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ಮತ್ತು ಶ್ರೀ ಗುರು ವಂದನೆ ಮಾಯಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸೊರಕೆಯವರು ಚಾಲನೆ ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ಮಾತಾಡಿ, ಶ್ರೀ ನಾರಾಯಣ ಗುರು ಯುವ ವೇದಿಕೆ ಮೇಲುಸ್ತುವಾರಿಯಲ್ಲಿ ನಡೆಯುವ ಇಂತಹ ಒಳ್ಳೆಯ ಕೆಲಸಕ್ಕೆ ತಮ್ಮ ಸಂಪೂರ್ಣ ಸಹಕಾರ ಇದೆ. ತನ್ನ ಸ್ವಕ್ಷೇತ್ರದಲ್ಲಿ ನಿರ್ಮಾಣ ಗೊಳ್ಳುವ ಶ್ರೀ ನಾರಾಯಣ ಗುರುಗಳ ಉದ್ಯಾನವನದಲ್ಲಿ ಪಾಲ್ಗೊಳ್ಳುವುದು ಒಂದು ಪುಣ್ಯದ ಕೆಲಸವಾಗಿದೆ. ಈ ಐತಿಹಾಸಿಕ ಯೋಜನೆ ಆದಷ್ಟು ಶೀಘ್ರವಾಗಿ ಸಂಪೂರ್ಣಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ ಬಂಗೇರ, ಯುವವಾಹಿನಿ ಅಧ್ಯಕ್ಷರಾದ ದಯಾನಂದ ಕರ್ಕೇರ, ಹರೀಶ್ ಪೂಜಾರಿ ಮಲ್ಪೆ, ಕಡೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಕರ ಸೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುತ್ಪಾಡಿ, ಪ್ರಶಾಂತ್ ಸಾಲಿಯಾನ್, ವೀಣಾ ಪ್ರಕಾಶ್, ಸುಲೋಚನ, ಉದ್ಯಮಿ ಕಿಶನ್ ಹೆಗ್ಡೆ, ಪ್ರಮುಖರಾದ ಮುತ್ತಯ್ಯ ಕೋಟ್ಯಾನ್, ಶೇಖರ್ ಅಂಚನ್, ಯೋಗೇಶ್ ಕೋಟ್ಯಾನ್, ಸಂತೋಷ್ ಕುಮಾರ್, ವಿಜಯ್ ಪೂಜಾರಿ, ಗಣೇಶ್ ಕುಮಾರ್, ಶೇಖರ್ ಕೋಟ್ಯಾನ್, ಗಿರೀಶ್ ಕುಮಾರ್ ಉದ್ಯಾವರ, ದಿನೇಶ್ ಜತ್ತನ್, ಪ್ರಕಾಶ್ ಪೂಜಾರಿ, ಹಬೀಬ್ ಅಲಿ, ರೋಯ್ಸ್ ಫೆರ್ನಾಂಡಿಸ್, ರಿಯಾಜ್ ಪಳ್ಳಿ, ನಂದ ಕಿಶೋರ್, ದಿವಾಕರ್ ಬೊಳ್ಜೆ, ಲಕ್ಷ್ಮಣ ಸನಿಲ್, ಸಚಿನ್ ಸಾಲ್ಯಾನ್, ಸೋಮಸುಂದರ್ ಉಡುಪಿ, ಶಶಿಧರ್ ಬಂಗೇರ ಕಡೆಕಾರ್, ಬಾಲಕೃಷ್ಣ ಪೂಜಾರಿ ಕುಕ್ಕುಂಜೆ, ಶಬರೀಷ್ ಸುವರ್ಣ, ಸಾಯಿ ರಾಜ್ ಕೋಟ್ಯಾನ್, ಸುಜಯ್ ಪೂಜಾರಿ, ಪ್ರಭಾಕರ ಕೋಟ್ಯಾನ್, ಸತೀಶ್ ಬೀರಪ್ಪಾಡಿ, ರಘು ಸನಿಲ್, ಸುಪ್ರೀತ್ ಸುವರ್ಣ, ಸುಧಾಕರ್ ಉದ್ಯಾವರ, ಸುನೀಲ್ ಪೂಜಾರಿ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಮಿಥುನ್ ಅಮೀನ್ ಸ್ವಾಗತಿಸಿದರೆ, ಗೌರವಾಧ್ಯಕ್ಷ ಸದಾಶಿವ ಅಮೀನ್ ವಂದಿಸಿದರು. ಸ್ಟೀವನ್ ಕುಲಾಸೋ ಉದ್ಯಾವರ ಕಾರ್ಯಕ್ರಮ ನಿರೂಪಣೆ ಮಾಡಿದರು.



