Home Latest ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರ ನಿಯುಕ್ತಿ…!!

ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರ ನಿಯುಕ್ತಿ…!!

ಉಡುಪಿ: ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಿಯುಕ್ತಿಗೊಂಡಿರುವ ಜಿಲ್ಲಾ ಮೋರ್ಚಾಗಳ ನೂತನ ಅಧ್ಯಕ್ಷರುಗಳ ವಿವರ ಹೀಗಿದೆ :

1. ಎಸ್.ಟಿ. ಮೋರ್ಚಾ :

ಭುಜಂಗ ನಾಯ್ಕ ಸರಳೇಬೆಟ್ಟು

2. ಎಸ್.ಸಿ. ಮೋರ್ಚಾ :

ಡಿ. ಬಿ. ಕೃಷ್ಣ ಮೂರ್ತಿ

3. ರೈತ ಮೋರ್ಚಾ :

ಕಮಲಾಕ್ಷ ಹೆಬ್ಬಾರ್

4. ಹಿಂದುಳಿದ ವರ್ಗಗಳ ಮೋರ್ಚಾ :

ಪ್ರವೀಣ್ ಕುಮಾರ್ ಗುರ್ಮೆ

5. ಯುವ ಮೋರ್ಚಾ :

ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ

6. ಮಹಿಳಾ ಮೋರ್ಚಾ :

ಸಂಧ್ಯಾ ರಮೇಶ್

7. ಅಲ್ಪಸಂಖ್ಯಾತ ಮೋರ್ಚಾ :

ರುಡಾಲ್ಫ್ ಡಿ’ಸೋಜಾ

ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಜನಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಈ ನಿಯುಕ್ತಿಯನ್ನು ಮಾಡಲಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.