Home Kundapura News ಸ್ಪಂದನ ಯುವಕ ಸಂಘದಿಂದ ರಕ್ತದಾನ ಶಿಬಿರ…!!

ಸ್ಪಂದನ ಯುವಕ ಸಂಘದಿಂದ ರಕ್ತದಾನ ಶಿಬಿರ…!!

ಕುಂದಾಪುರ : ಸ್ಪಂದನ ಯುವಕ ಸಂಘ ಮಂಕಿ ಗುಜ್ಜಾಡಿ, ಇವರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಇವರ ಸಹಯೋಗದೊಂದಿಗೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿ ಇಲ್ಲಿ ಜರಗಿತು.

ಈ ಸಂದರ್ಭದಲ್ಲಿ ಉದ್ಘಾಟನೆಯನ್ನು ಡಾ. ಮಧುಕರ್ ದೇವಾಡಿಗ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು, ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ರೆಡ್ ಕ್ರಾಸ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಕ್ಷಯ್ ಮಂಕಿ ಸ್ವಾಗತಿಸಿದರು ,ಕಿಶೋರ್ ದೇವಾಡಿಗ ವಂದಿಸಿದರು.