ಉಪ್ಪಿನಂಗಡಿ: ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ರಸ್ತೆ ಕಾಮಗಾರಿ ವೇಳೆ ರೋಡ್ ರೋಲರ್‌ನ ಅಡಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಚತುಷ್ಪಥ ರಾಷ್ಟ್ರೀಯ ಕಾಮಗಾರಿಯ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ವ್ಯಕ್ತಿಯೋರ್ವ ರಸ್ತೆ ಬದಿ ಮಲಗಿದ್ದ ಎಂದು ಹೇಳಲಾಗಿದೆ.
ಆತನ ಮೇಲೆ ರೋಡ್ ರೋಲರ್ ಚಲಿಸಿದ್ದು ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.




