ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು .
ಇದೇ ಸಂಧರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ಗೆ ಅಗಮಿಸಲಿರುವ ರಾಜ್ಯ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವರಾದ ,ಶ್ರೀ ರಾಮ ಲಿಂಗ ರೆಡ್ಡಿಯವರಿಗೆ ,ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,ವಿಧಾನ ಪರಿಷತ್ ಸದಸ್ಯರಾದ ಅರತಿ ಕೃಷ್ಣ, ಮತ್ತು ಇತರ ಗಣ್ಯರನ್ನು ಮಹಾ ರುದ್ರ ಯಾಗ ಸಮಿತಿಯ ಸೇವಾಕರ್ತರು ,ಮಹಾ ರುದ್ರಯಾಗ ಸಮಿತಿಯ ಕಾರ್ಯಧ್ಯಕ್ಷರು ಅಗಿರುವ ಶ್ರೀ ಪ್ರಸಾದ್ ರಾಜ್ ಕಾಂಚನ್ ಅಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಿದರು.








ಈ ಸಂಧರ್ಭದಲ್ಲಿ ಮಹಾ ರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರುಗಳಾದ ಶ್ರೀ ಕೃಷ್ಣ ಮೂರ್ತಿ ಅಚಾರ್ಯ ಕಿನ್ನಿಮುಲ್ಕಿ ,ತಾರನಾಥ ಪೂಜಾರಿ ಉಪಸ್ಥಿತರಿದ್ದರು.




