Home Crime ಬೀಜಾಡಿ ಜಂಕ್ಷನ್ ಬಳಿ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು…!!

ಬೀಜಾಡಿ ಜಂಕ್ಷನ್ ಬಳಿ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು…!!

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಬೈಂದೂರು ಏಕಮುಖ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ದಿನಾಂಕ 06/05/2026ರ ಮುಂಜಾನೆ ಸುಮಾರು 12:30ರಿಂದ 12:50ರ ಅವಧಿಯಲ್ಲಿ, ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಲಾರಿ ಅನ್ನು ಚಾಲಕ ಸಿಪಾಯಿ ಶಬ್ಬೀರಹುಸೇನ್ ಹಾಜಿ ಇಬ್ರಾಹಿಂ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.

ಲಾರಿ ಬೀಜಾಡಿ ಜಂಕ್ಷನ್  ಬಳಿ ತಲುಪಿದಾಗ, ಬಲಗಡೆಯಿಂದ ಓವರ್‌ಟೇಕ್ ಮಾಡಿಕೊಂಡು ಮುಂದೆ ಬರುತ್ತಿದ್ದ ಮೋಟಾರ್ ಸೈಕಲ್  ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಬೈಕ್ ಸವಾರ ಪರಸಪ್ಪ ಚಂದಪ್ಪ ಲಮಾಣಿ (57) ಅವರಿಗೆ ತೀವ್ರ ರಕ್ತಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸ್ಥಳೀಯರು ತಕ್ಷಣ ಅವರನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಮುಂಜಾನೆ 1:20ಕ್ಕೆ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಕುರಿತು ಮೃತರ ಸಂಬಂಧಿ ಸೋಮೇಶ ಲಮಾಣಿ (28), ಶಿರಹಟ್ಟಿ, ಗದಗ ಜಿಲ್ಲೆಯವರು ನೀಡಿದ ದೂರಿನ ಮೇರೆಗೆ ಕುಂದಾಪುರ ಟ್ರಾಫಿಕ್ ಪೊಲೀಸ್ ಸ್ಟೇಷನ್ನ ಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.