Home Crime ಅಮಾಸೆಬೈಲಿನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ…!!

ಅಮಾಸೆಬೈಲಿನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ…!!

ಅಮಾಸೆಬೈಲು: ಹೊಸಂಗಡಿ ಗ್ರಾಮದ ನಿವಾಸಿ ರಜನೀಶ್‌ (44) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮಾಸೆಬೈಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ರಜನೀಶ್‌ ಅವರು ಪೈಂಟಿಂಗ್‌ ಕೆಲಸ ಮಾಡಿಕೊಂಡಿದ್ದು, ವ್ಯವಹಾರದ ನಿಮಿತ್ತ ಹಲವು ಕಡೆ ಸಾಲ ಮಾಡಿದ್ದರು ಎನ್ನಲಾಗಿದೆ. ದಿನಾಂಕ 05-05-2026 ರಂದು ಮಧ್ಯಾಹ್ನದಿಂದ ಕೆಲಸಕ್ಕೆ ತೆರಳದೇ ಇದ್ದ ಅವರು ಸಂಜೆ ಮನೆಗೂ ಹಿಂದಿರುಗಿರಲಿಲ್ಲ. ಇದರಿಂದ ಕುಟುಂಬದವರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.

ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಹೊಸಂಗಡಿ ಗ್ರಾಮದ ಕೋಟೆಕೆರೆ ಪ್ರದೇಶದ ಹಾಡಿಯೊಂದರಲ್ಲಿ ರಜನೀಶ್‌ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಕುರಿತು ಮೃತರ ಸಹೋದರ ರಾಜೇಶ್‌ (42) ಅವರು ನೀಡಿದ ದೂರಿನ ಮೇರೆಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.