Home Crime ಬಂಟ್ವಾಳ: ಮಹಿಳೆಯರಿಗೆ ಅಪಮಾನ ಮಾಡಿದ ಅಪ್ರಾಪ್ತ ಬಾಲಕ ಪೊಲೀಸ್ ವಶಕ್ಕೆ…!!

ಬಂಟ್ವಾಳ: ಮಹಿಳೆಯರಿಗೆ ಅಪಮಾನ ಮಾಡಿದ ಅಪ್ರಾಪ್ತ ಬಾಲಕ ಪೊಲೀಸ್ ವಶಕ್ಕೆ…!!

ಬಂಟ್ವಾಳ: ಅಪರಿಚಿತ ಸ್ಕೂಟರ್ ಸವಾರನು ರಸ್ತೆಯಲ್ಲಿ ರಾತ್ರಿ 7.30-8.00 ಗಂಟೆಯ ಅವಧಿಯಲ್ಲಿ ಕೆಲಸಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನ ಮಾಡಿದ ಕೃತ್ಯ ಎಸಗಿದ್ದು, ಆರೋಪಿತನ ಪತ್ತೆ ಬಗ್ಗೆ ತನಿಖೆ ನಡೆಸಲಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ನಿವಾಸಿ ತನ್ನ ಪೋಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕನು ಈ ಕೃತ್ಯವನ್ನು ಎಸಗಿರುವುದು ಲಭ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ.

ಅದರಂತೆ ಆಗಸ್ಟ್,26 ರಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಆತನ ಸ್ವ ಗೃಹದಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಬಾಲನ್ಯಾಯ ಮಂಡಳಿ ಮಂಗಳೂರುರವರ ಸಮಕ್ಷಮಕ್ಕೆ ಆಗಸ್ಟ್ 26 ರಂದು ಹಾಜರುಪಡಿಸಲಾಗಿದ್ದು, ಮಾನ್ಯ ಬಾಲ ನ್ಯಾಯಾಲಯವು ಬಾಲಕನನ್ನು ದಿನಾಂಕ ಸೆ.2ರವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ನೀಡಿದೆ.