Home Karkala News ಕಾರ್ಕಳ: ಅಳದಂಗಡಿ ಬೆಟ್ಟದ ಸಾಲಿನಲ್ಲಿ ಭಾರೀ ಕಾಡ್ಗಿಚ್ಚು…!!

ಕಾರ್ಕಳ: ಅಳದಂಗಡಿ ಬೆಟ್ಟದ ಸಾಲಿನಲ್ಲಿ ಭಾರೀ ಕಾಡ್ಗಿಚ್ಚು…!!

ಕಾರ್ಕಳ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ವ್ಯಾಪ್ತಿಯ ಅಳದಂಗಡಿ ಬೆಟ್ಟದ ಸಾಲಿನ ತಪ್ಪಲಿನಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡ ಘಟನೆ ಶನಿವಾರ ಸಂಜೆ, ಮೇ 2ರಂದು ನಡೆದಿದೆ.

ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹರಡುವ ಹೆಚ್ಚಿನ ಅಪಾಯವಿರುವುದರಿಂದ ಈ ಅಗ್ನಿ ಅವಘಡ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಜ್ವಾಲೆಯ ತೀವ್ರತೆಯು ಅಳದಂಗಡಿ ಪಟ್ಟಣದಿಂದಲೂ ಕಾಣಿಸುತ್ತಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.

ತೀವ್ರ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಯಿತು ಎಂದು ಡಿಎಫ್‌ಒ ಶಿವರಾಮ್ ಬಾಬು ತಿಳಿಸಿದ್ದಾರೆ.