Home Crime ಹಿರಿಯಡ್ಕ : ಕಾಲು ಜಾರಿ‌ ತೋಡಿಗೆ ಬಿದ್ದು ವ್ಯಕ್ತಿಯೋರ್ವರು ಸಾವು…!!

ಹಿರಿಯಡ್ಕ : ಕಾಲು ಜಾರಿ‌ ತೋಡಿಗೆ ಬಿದ್ದು ವ್ಯಕ್ತಿಯೋರ್ವರು ಸಾವು…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ‌ ಸಮೀಪ ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು ಕಾಲು ಜಾರಿ ತೋಡಿಗೆ ಬಿದ್ದು ಮೃದುವಾದ ಘಟನೆ ನಡೆದಿದೆ.

ಸಾವನ್ನಪ್ಪಿದವರು ಪೆರ್ಡೂರು ಗ್ರಾಮದ ಶಶಿಕಾಂತ್ ಎಂದು ತಿಳಿದು ಬಂದಿದೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಅಭಿಷೇಕ (25),ಪೆರ್ಡೂರು ಗ್ರಾಮ ಉಡುಪಿ ಇವರ ತಂದೆ ಶಶಿಕಾಂತ (56) ಎಂಬುವವರು ಕೃಷಿ ಕೆಲಸ ಮಾಡಿಕೊಂಡಿದ್ದು 10:15 ವರ್ಷಗಳಿಂದ ಅಮಲು ಪದಾರ್ಥ ಸೇವಿಸುವ ಚಟದವರಾಗಿದ್ದು ದಿನಾಂಕ 18/08/2025 ರಂದು ಬೆಳಿಗ್ಗೆ 11:00 ಗಂಟೆಗೆ ಪೇಟೆಗೆಂದು ಹೋದವರು ಅಲ್ಲಿಂದ ತನ್ನ ಮನೆಗೆ ನಡೆದುಕೊಂಡು ಬರುವಾಗ ಮನೆಯ ಬಳಿಯ ಬಂಡಾಳಿ ಕೆಳಪೈ ಬೆಟ್ಟುವಿನ ಮಣ್ಣು ರಸ್ತೆಯಲ್ಲಿ ಬರುತ್ತಿರುವಾಗ ಕಾಲು ಜಾರಿ ಅಥವಾ ತನ್ನ ಮೈ ವಾಲಿ ನೀರು ಹೋಗುವ ತೋಡಿಗೆ ಬಿದ್ದವರನ್ನು ಮದ್ಯಾಹ್ನ 03:00 ಗಂಟೆಗೆ ನೋಡಿದವರನ್ನು ಚಿಕಿತ್ಸೆ ಬಗ್ಗೆ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದವನ್ನು ಅಲ್ಲಿಯ ವೈದ್ಯರು ಪರೀಕ್ಷಿಸಿ ಸಂಜೆ 05:45 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.