ಉಡುಪಿ: ಉಡುಪಿ ಜಿಲ್ಲೆಯ ಕೊಡವೂರುವಿನಲ್ಲಿರುವ ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಏಪ್ರಿಲ್ 14ರಿಂದ 19ರವರೆಗೆ ಶ್ರೀ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ “5 ದಿನಗಳ ಕಾಲ ಮಹಾ ರುದ್ರಯಾಗ ನಡೆಯಲಿದೆ
ಈ ಕಾರ್ಯಕ್ರಮದಲ್ಲಿ ಭಕ್ತರು ಬಹುಪಾಲು ಭಾಗವಹಿಸುವ ನಿರೀಕ್ಷೆ ಇದ್ದು, ವಿಶೇಷ ಪೂಜೆಗಳು, ಹೋಮ-ಹವನಗಳು ಹಾಗೂ ಧಾರ್ಮಿಕ ಆಚರಣೆಗಳು ನಡೆಯಲಿವೆ. ಭಕ್ತರ ಅನುಕೂಲಕ್ಕಾಗಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಉಚಿತ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಭಾಗವಹಿಸಿ ಧಾರ್ಮಿಕ ಲಾಭ ಪಡೆಯುವಂತೆ ಸಂಘಟಕರು ಮನವಿ ಮಾಡಿದ್ದಾರೆ.






