ಮಂಗಳೂರು : ನಗರದಲ್ಲಿ ಯುವಕ ಮತ್ತು ಯುವತಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಅಮೀರ್ ಸುಹೈಲ್ ಹಾಗೂ ಫಾತಿಮಾ ಜುವಾ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ : ದಿನಾಂಕ 05-08-2025 ರಂದು 12:00 ಗಂಟೆಗೆ ಪಿರ್ಯಾದಿ ಮೋಹನ್ ಪಿಎಸ್ ಐ ಹಗಲು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 12:45 ಗಂಟೆಗೆ ವೆಲೆನ್ಸಿಯಾ ಬಸ್ಸು ನಿಲ್ದಾಣದ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಹಾಗೂ ಓರ್ವ ಯುವತಿಯು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಸ್ಥಳಕ್ಕೆ ಸಮಯ ಸುಮಾರು 13:00 ಗಂಟೆಗೆ ಬಂದಲ್ಲಿ ವೆಲೆನ್ಸಿಯಾ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳಕ್ಕೆ ಬಂದು ನೋಡಲಾಗಿ ಓರ್ವ ವ್ಯಕ್ತಿ ಹಾಗೂ ಓರ್ವ ಯುವತಿಯು ನಿಂತುಕೊಂಡಿದ್ದು, ವಿಚಾರಿಸಲಾಗಿ ಅವರು ನಶೆಯಲ್ಲಿದ್ದು, ಅವರ ಹೆಸರು ವಿಳಾಸ ಕೇಳಲಾಗಿ ಅಮೀರ್ ಸುಹೈಲ್ ಪ್ರಾಯ :29 ವರ್ಷ, ವಾಸ: ಒಂದನೆ ಮಹಡಿ, ಅಮಿನಾ ವಿಲ್ಲಾ, ಅನ್ಸಾರಿ ರಸ್ತೆ ಬಂದರು ಮಂಗಳೂರು ಎಂಬುದಾಗಿ ತಿಳಿಸಿದ್ದು ಹಾಗೂ ಯುವತಿಯು ತನ್ನ ಹೆಸರು ವಿಳಾಸ ಫಾತಿಮಾ ಜುವಾ ಪ್ರಾಯ:24 ವರ್ಷ, ವಾಸ: ಜೆಪ್ಪು ಮಜಿಲ ನಾಗಬನ ರೋಡ್ ವೆಲೆನ್ಸಿಯಾ ಎಂದು ತೊದಲು ಮಾತಿನಿಂದ ತಿಳಿಸಿದ್ದು, ಕೂಡಲೇ ಅವರಿಬ್ಬರನ್ನು ಯಾವುದಾರರೂ ನಿಷೇದಿತ ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವಿಚಾರಿಸಲಾಗಿ ಮಾಧಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ನಂತರ ಕುಂಟಿಕಾನ ಎ.ಜೆ ಆಸ್ಪತ್ರೆಗೆ ಸದ್ರಿ ಯವರು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಡಿಸುವರೇ ಕೋರಿಕೆ ಪತ್ರದೊಂದಿಗೆ ವೈದ್ಯಾಧಿಕಾರಿಯವರ ಮುಂದೆ ಹಾಜರು ಪಡಿಸಿದ್ದು, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿರವರು ಅಮೀರ್ ಸುಹೈಲ್ ಹಾಗೂ ಫಾತಿಮಾ ಜುವಾ ಎಂಬವರನ್ನು ಪರೀಕ್ಷೆಗೊಳಪಡಿಸಿ ಅಮೀರ್ ಸುಹೈಲ್ ಎಂಬಾತನು ಮಾದಕ ವಸ್ತುಗಳಾದ AMPHETAMINE, METHAMPHETAMINE, TETRAHYDRACANNADINOID ಸೇವನೆ ಮಾಡಿರುವುದಾಗಿ ಹಾಗೂ ಫಾತಿಮಾ ಜುವಾ ಎಂಬಾಕೆಯು AMPHETAMINE, METHAMPHETAMINE ಎಂಬ ಮಾಧಕ ವಸ್ತುವನ್ನು ಸೇವನೆ ಮಾಡಿರುವುದಾಗಿ ವೈದ್ಯಕೀಯ ದೃಡಪತ್ರ ನೀಡಿರುತ್ತಾರೆ. ಆದುದರಿಂದ ಕಾನೂನು ಬಾಹಿರವಾದ ನಿಷೇದಿತ ಮಾದಕ ವಸ್ತು ಸೇವನೆ ಮಾಡಿರುವ ಆರೋಪಿತರಾದ ಅಮೀರ್ ಸುಹೈಲ್ ಹಾಗೂ ಫಾತಿಮಾ ಜುವಾ ಎಂಬವರ ವಿರುದ್ದ ಕಲಂ: 27(ಬಿ) ಎನ್.ಡಿ.ಪಿ.ಎಸ್ ಕಾಯಿದೆ ರಂತೆ ಪ್ರಕರಣದ ದಾಖಲಾಸಿರುವುದಾಗಿದೆ.