ಕಾರವಾರ : ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಕ್ಕೆ ವ್ಯಕ್ತಿ ಒಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕಾರವಾರ ಚಿತ್ತಾಕುಲದಿಂದ ವರದಿಯಾಗಿದೆ. ಚರ್ಚನಲ್ಲಿ ಅವ್ಯವಹಾರ ಮಾಡಿ ಹಣ ತಿಂದಿರುವ ಕುರಿತು ಆಸಿಸ್ ಸಾವೆರ್ ಮಿನಿನ್ ಫರ್ನಾಂಡಿಸ್ ಸಾ :ಚರ್ಚವಾಡ, ಹಳಗ ತಾ :ಕಾರವಾರ ಇವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರೆಂದು ಹೇಳಲಾಗಿದೆ. ಇದನ್ನು ಆಕ್ಷೇಪಿಸಿ ದೂರನ್ನು ಹಿಂಪಡೆಯುವಂತೆ ಆಸಿಸ್ ಸಾವೇರ್ ಮಿನಿನ್ ಪರ್ನಾಂಡಿಸ್ ಎಂಬಾತನ ಮೇಲೆ ಮನೆಯ ಬಳಿ ತಂಡ ಕಟ್ಟಿ ಬಂದು ಹಲ್ಲೆ ನಡೆಸಿದ್ದಾಗಿ ತಿಳಿದುಬಂದಿದೆ.
ಈ ಕುರಿತಂತೆ ಫುಲ್ಲರ್ ಅಫೋಲಿನ್ ಫರ್ನಾಂಡಿಸ್, ಜೋಸೆಫ್ ಥಾಮಸ್ ಫರ್ನಾಂಡಿಸ್, ಮೆಕ್ಸಿ ಅಪೋಲಿನ್ ಫರ್ನಾಂಡಿಸ್, ವಿಲ್ಸನ್ ಮಾರ್ಷಲ್ ಫರ್ನಾಂಡಿಸ್, ರೋಮಿ ಅಪೋಲಿನ್ ಫರ್ನಾಂಡಿಸ್, ಶ್ರೀಮತಿ ರಿಂಕೊ ಫುಲರ್ ಫರ್ನಾಂಡಿಸ್ ಎಲ್ಲರೂ ಸಾ:ಹಳಗ ಕಾರವಾರ ಇವರುಗಳ ಮೇಲೆ ದೂರು ನೀಡಲಾಗಿದೆ.
ದೂರುದಾರ ಆಸಿಸ್ ಫರ್ನಾಂಡಿಸ್ ಸಾಮಾಜಿಕ ಕಾರ್ಯಕರ್ತರಾಗಿದ್ದು ಹಲ್ಲೆಗೊಳಗಾದ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ





