Home Crime ತಮಿಳು ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ ಆತ್ಮಹತ್ಯೆ…!!

ತಮಿಳು ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ ಆತ್ಮಹತ್ಯೆ…!!

ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ (ಸುಬಾ) ಸೋಮವಾರ ಚೆನ್ನೈನ ಅಯ್ಯಪ್ಪಂತಂಗಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಟಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಶ್ರೀಲಂಕಾ ಮೂಲದ ಸುಭಾಷಿಣಿ ಅವರು ಜನಪ್ರಿಯ ಧಾರಾವಾಹಿ ‘ಕಾಯಲ್’ ಮೂಲಕ ಮನೆಮಾತಾಗಿದ್ದರು. ವರದಿಗಳ ಪ್ರಕಾರ, ಘಟನೆಗೂ ಮುನ್ನ ಸುಭಾಷಿಣಿ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕರೆ ಮೂಲಕ ತೀವ್ರ ಜಗಳವಾಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಕೊನೆಗಾಣಿಸಿದ್ದಾರೆ.

ಏಪ್ರಿಲ್ 12ರಂದು ಸುಭಾಷಿಣಿ ಅವರ ಹುಟ್ಟುಹಬ್ಬವಿತ್ತು ಹಾಗೂ ಏಪ್ರಿಲ್ 21ರಂದು ಅವರ ಎರಡನೇ ವಿವಾಹ ವಾರ್ಷಿಕೋತ್ಸವವಿತ್ತು. ಸಂಭ್ರಮಿಸಬೇಕಾದ ದಿನಗಳು ಹತ್ತಿರವಿರುವಾಗಲೇ ನಟಿ ಇಹಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.