Home Crime ಬೈಂದೂರು : ಅಡಿಕೆ ಕಳವು ಪ್ರಕರಣ : ನಾಲ್ಕು ಮಂದಿ ಆರೋಪಿಗಳ ಬಂಧನ…!!

ಬೈಂದೂರು : ಅಡಿಕೆ ಕಳವು ಪ್ರಕರಣ : ನಾಲ್ಕು ಮಂದಿ ಆರೋಪಿಗಳ ಬಂಧನ…!!

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದ್ದ ಗೋಡೌನ್ ನಲ್ಲಿ ಅಡಿಕೆ ಕಳ್ಳತನ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಬೈಂದೂರು ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ವಿವರ: ಪಿರ್ಯಾದುದಾರರಾದ ಮಸೂದ್ ಪಟೇಲ್ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ, ಸುಮಾರು 60 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು, ಹಲಸು, ಮಾವು ರಬ್ಬರ್ ಇತರ ಬೇರೆ ಬೇರೆ ಕೃಷಿ ಮಾಡಿ ಕೊಂಡಿರುತ್ತಾರೆ. ಪಿರ್ಯದುದಾರರು ತಮ್ಮ ತೋಟದಲ್ಲಿ ಅದ ಈ ವರ್ಷದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್ ನಲ್ಲಿ ಇಟ್ಟು ಕಪ್ಪು ಬಣ್ಣದ ಪ್ಯಾಸ್ಟಿಕ್ ಮುಚ್ಚಿ ಇಟ್ಟಿರುತ್ತಾರೆ. ದಿನಾಂಕ 22.05.2025 ರಂದು ಬೆಳಿಗ್ಗೆ 10.00 ಗಂಟೆಗೆ ಹಡಿನಗದ್ದೆ ತೋಟದ ಗೋಡೌನ್ ಹೋಗಿ ನೋಡಿದಾಗ ಗೋಡೌನ ಎದುರಿನ ಕಬ್ಬಿಣದ ಡ್ರಿಲ್ ನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು, ಗೋಡೌನ್ ಲ್ಲಿ ಇದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲ ಹಾಕಿ ಕಟ್ಟಿ ಇಟ್ಟಿರುವುದನ್ನು ದಿನಾಂಕ; 15.05.2025 ರಿಂದ ದಿನಾಂಕ;22.05.2025 ರಂದು ಬೆಳಿಗ್ಗೆ 10.00 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಗೋಡೌನ್‌ ಬೀಗ ಮುರಿದು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಕಳವಾದ ಅಡಿಕೆಯ ಮೌಲ್ಯ ಸುಮಾರು 5 ಲಕ್ಷ 60 ರೂಪಾಯಿ ಅಗಬಹುದು. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 106/2025 ಕಲಂ 331(3) 331(4) 305 BNS ರಂತೆ ಪ್ರಕರಣ ದಾಖಲಿಸಿಕೊಳ್ಳ ಲಾಗಿರುತ್ತದೆ.

ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್‌ ಶಂಕರ ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್‌ ಹಾಗೂ ಶ್ರೀ ಹೆಚ್‌ ಡಿ ಕುಲಕರ್ಣಿ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಹಾಗೂ ಶ್ರೀ ಸವೀತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನೇತೃತ್ವದಲ್ಲಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮತ್ತು ಪತ್ತೆಗೆ 2 ತಂಡಗಳಾಗಿ ನೇಮಕ ಮಾಡಿದ್ದು ತಂಡದ ನೇತೃತ್ವವನ್ನು ಶ್ರೀ ತಿಮ್ಮೇಶ್ ಬಿ ಎನ್ ಪಿ.ಎಸ್.ಐ., ಶ್ರೀ ನವೀನ ಬೋರಕರ ಪಿ.ಎಸ್.ಐ. ಬೈಂದೂರು ಠಾಣೆ , ಶ್ರೀ ವಿನಯ ಪಿ.ಎಸ್.ಐ. ಕೊಲ್ಲೂರು ಠಾಣೆ ಮತ್ತು ಸಿಬ್ಬಂದಿಯವರಾದ ನಾಗೇಂದ್ರ ಹೆಚ್‌ ಸಿ ಕೊಲ್ಲೂರು ಠಾಣೆ, ಸುರೇಶ್‌ ಹೆಚ್‌ ಸಿ ಕೊಲ್ಲೂರು ಠಾಣೆ , ಚಿದಾನಂದ ಪಿಸಿ, ಮಾಳಪ್ಪ ದೇಸಾಯಿ ಪಿಸಿ, ಪರಯ್ಯ ಮಠಪತಿ ಪಿ ಸಿ ಬೈಂದೂರು ಠಾಣೆ, ರವೀಂದ್ರ ಪಿ ಸಿ ಬೈಂದೂರು ವೃತ್ತ , ಅಶೋಕ ಪಿಸಿ ಬೈಂದೂರು ವೃತ್ತ , ಹಾಗೂ ಚಂದ್ರ ಎಪಿಸಿ ಅವರ ತಂಡ ಆರೋಪಿತರಾದ 1) ಸಂತೋಷ(35) ತಂದೆ: ಅಣ್ಣಿ ಪೂಜಾರಿ, ವಾಸ: ಮಾವಿನ ಕಟ್ಟೆ, ನೂಜಿ ಬಾಳ್ತಿಲ ಗ್ರಾಮ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 2)ಶಾನೂರು ಬಾಬುಲಾಲ್ ನವಾಜ್ @ ನವಾಜ್ @ ಘಜ್ನಿ(31) ತಂದೆ: ದಿ. ಬಾಬುಲಾಲ್ ನವಾಜ್, ಖಾಯಂ ವಿಳಾಸ: ಮನೆ ನಂಬ್ರ-31,ಹವಳದ ಹಿಂಡಿನಗೆರೆ, ತಂಬೂರು ಅಂಚೆ, ಕಲಘಟಗಿ ತಾಲೂಕು, ಧಾರವಾಡ ಜಿಲ್ಲೆ. ಪ್ರಸ್ತುತ ವಾಸ: ಇಸ್ತಿಕಾರ್ ರವರ ಬಾಡಿಗೆ ಮನೆ, ಕೇಸರಗದ್ದೆ, ಬಿಲ್ಲಾಲ್ ಖಂಡ್, ಗುಳ್ಮಿ, ಮುಠಳ್ಳಿ ಗ್ರಾಮ, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ
3) ಖ್ವಾಜಾ @ ಮಹಮ್ಮದ್ ಖ್ವಾಜಾ @ ಖಾಜಾ(26) ತಂದೆ: ದಿ.ಮಹಮ್ಮದ್ ಖಾಸಿಂ ದೊಡ್ಮನಿ, ವಾಸ: ಬಿಲ್ಲಾಲ್ ಖಂಡ್, ಗುಳ್ಮಿ, ಮುಠಳ್ಳಿ ಗ್ರಾಮ, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ 4)ಮಹಮ್ಮದ್ ಸಾಧಿಕ್ @ ಸಾಧಿಕ್(27) ತಂದೆ: ಅಲ್ ಬಕ್ಸ್ ಸತ್ತಾರ್ ಸಾಬ್ ಶೇಖ್, ವಾಸ: ಬಿಲ್ಲಾಲ್ ಖಂಡ್, ಗುಳ್ಮಿ, ಇಮಾಮ್ ಮಲ್ಲಿಕ್ ಮಸೀದಿ ಹತ್ತಿರ, ಮುಠಳ್ಳಿ ಗ್ರಾಮ, ಭಟ್ಕಳ ತಾಲೂಕು, ಉತ್ತರಕನ್ನಡ ಜಿಲ್ಲೆ, ರವರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸದ್ರಿ ಪ್ರಕರಣಗಳಲ್ಲಿ ಕಳವು ಮಾಡಿದ 455 ಕೆ.ಜಿ ಅಡಿಕೆ ಮತ್ತು ಕಳವು ಮಾಡಿದ ಅಡಿಕೆಯನ್ನು, ಸಾಗಾಟ ಮಾಡಲು ಬಳಸಿದ KA20 Z1644 ನೇ ನಂಬ್ರದ Ford Figo TD Ci ಕಾರನ್ನು ಸ್ವಾಧಿನ ಪಡಿಸಿ ಕೊಳ್ಳಲಾಗಿದೆ.